flixOye
Buzz

ಚಿಕ್ಕ ವಯಸಲ್ಲಿಯೇ ಕುಟುಂಬದ ಹೊಣೆ ಹೊತ್ತಿರುವ ಕೋಮಲಾಳಿಗಾಗಿ ಚಿತ್ರಾನ್ನ ಮಾರಿದ “ರೀಯಲ್ ಸ್ಟಾರ್ ಉಪೇಂದ್ರ”

ಕಳೆದ ವಾರದ ಸದಾ ನಿಮ್ಮೊಂದಿಗೆ ಸಂಚಿಕೆಯಲ್ಲಿ ಪ್ರಿಯಾಂಕ ಉಪೇಂದ್ರ ಅವರು ಪುಷ್ಪಲತಾ ಎಂಬ ಹೂ ವ್ಯಾಪಾರ ಮಾಡೋ ಮಹಿಳೆಗೆ ಅವರ ಹಾಗೆ ಹೂವಿನ ವ್ಯಾಪಾರ ಮಾಡಿ ಆ ಕುಟುಂಬಕ್ಕೆ ಸಹಾಯವಾದರು.

ಈ ವಾರದ ಸಂಚಿಕೆಯಲ್ಲಿ ಹೂವಿನ ಜೊತೆ ನಾರು ಇದ್ದಂತೆ ಪ್ರಿಯಾಂಕ ಜೊತೆಗೆ ಅವರ ಜೊತೆಗಾರ ರೀಯಲ್ ಸ್ಟಾರ್ ಉಪೇಂದ್ರ ಸದಾ ನಿಮ್ಮೋಂದಿಗೆ ಕರ್ಯಾಕ್ರಮದಲ್ಲಿ ಭಾಗವಹಿಸಿದ್ದಾರೆ.

ಈ ಭಾನುವಾರದ ಸಂಚಿಕೆಯಲ್ಲಿ, ತಂದೆ ತಾಯಿಯನ್ನು ಕಳೆದುಕೊಂಡು, ವಿಕಲ ಚೇತನ ಅಕ್ಕ ಮತ್ತು ತಮ್ಮನನ್ನು ಸಾಕಲು ಕಷ್ಟಪಡುತ್ತಿರುವ ತುಂಬಾ ಕುಮಾರಿ ಕೋಮಲ ಅವರಿಗಾಗಿ ಸಹಾಯ ಮಾಡಲು ಸೂಪರ್ ಸ್ಟಾರ್ ಉಪೇಂದ್ರ ರೆಡಿಯಾಗಿದ್ದಾರೆ. ಹೋಟಲ್ ಕೆಲಸಗಾರರಂತೆ ದೋಸೆ, ಇಡ್ಲಿ ಮತ್ತು ಚಿತ್ರಾನ್ನವನ್ನು ತಯಾರಿಸಿ, ಮಾರಿ ಬಂದ ಹಣದದಿಂದ ಕೋಮಲಾಳ ಕುಟುಂಬಕ್ಕೆ ನೆರವಾಗಲಿದ್ದಾರೆ.

Advertisement

ಉಪೇಂದ್ರ ಕೋಮಲಗೋಸ್ಕರ ಸಂಪಾದಿಸಿದ ಹಣವೆಷ್ಟು? ಇದರ ಜೊತೆಗೆ ಸೂಪರ್ ಸ್ಟಾರ್ ತಮ್ಮ ವಯಕ್ತಿಕವಾಗಿ ಈ ಕುಟುಂಬಕ್ಕೆ ನೀಡಿದ ಸಹಾಯವೇನು? ಎಂಬುದು ಈವಾರದ ಸಂಚಿಕೆಯಲ್ಲಿ ತಿಳಿಯುತ್ತದೆ.
“ಸದಾ ನಿಮ್ಮೊಂದಿಗೆ” ಇದೇ ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

ಸಂಬಂಧಿತ · Related