flixOye
Buzz

ಉತ್ತರ ಕರ್ನಾಟಕ ಸೊಗಡಿನ ‘ಖೊಟ್ಟಿ ಪೈಸೆ’ ತೆರೆಗೆ ಸಿದ್ಧ

ಉತ್ತರ ಕರ್ನಾಟಕ ಸೊಗಡಿನ ‘ಖೊಟ್ಟಿ ಪೈಸೆ’ ತೆರೆಗೆ ಸಿದ್ಧ
ಜ್ಯೋತಿ ಫಿಲಂ ಬ್ಯಾನರ್ ಅಡಿಯಲ್ಲಿ ಬಾಗಲಕೋಟೆಯ ಸ್ಥಳೀಯ ಕಲಾವಿದರೆಲ್ಲರೂ ಸೇರಿ ಉತ್ತರ ಕರ್ನಾಟಕ ಭಾಷೆಯ ಸೊಗಡನ್ನು ಹೊಂದಿರುವ ‘ ಖೊಟ್ಟಿ ಪೈಸೆ’ ಚಿತ್ರವನ್ನು ಮಾಡಿದ್ದಾರೆ. ಚಿತ್ರದ ಚಿತ್ರೀಕರಣ ಪೂರ್ಣ ಗೊಂಡಿದ್ದು, ಇದೇ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ. ಚಿತ್ರದ ಚಿತ್ರೀಕರಣ ಬಾಗಲಕೋಟೆಯ‌ ಸುತ್ತಮುತ್ತ ನಡೆದಿದ್ದು, ಚಿತ್ರದಲ್ಲಿ ಹೊಸ ಪ್ರತಿಭೆಗಳಾದ ರಾಮಚೇತನ ನಾಯಕನಾಗಿ, ಸಹನಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಒಟ್ಟು 40 ಲಕ್ಷ ರೂ ಬಜೆಟ್ ನಲ್ಲಿ ತಯಾರಾದ ‘ಖೊಟ್ಟಿ ಪೈಸೆ’ ಚಿತ್ರದಲ್ಲಿ ಹಾಡು , ಫೈಟ್ ಇಲ್ಲ ಎಂದರು ಚಿತ್ರದ ನಿರ್ದೇಶಕ ಕಿರಣ್ ಆರ್.ಕೆ. ಗಿರಿಜಾಕುಮಾರ ಚಿತ್ರಕ್ಕೆ ಬಂಡವಾಳವನ್ನು ಹೂಡಿದ್ದು, ಚಿತ್ರವನ್ನು ವಿದೇಶದಲ್ಲೂ ಬಿಡುಗಡೆ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದರು ಗಿರಿಜಾ ಕುಮಾರ. ಛಾಯಾಗ್ರಾಹಕರಾಗಿ ಸದಾಶಿವ ಹಿರೇಮಠ, ರವಿತೇಜ ಸಂಗೀತ ನಿರ್ದೇಶಕರಾಗಿದ್ದಾರೆ.

ಸಂಬಂಧಿತ · Related