ನಿನ್ನೇ ಅಭಿಮಾನಿಗಳ ಮುಂದೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು ಗೋಲ್ಡನ್ ಸ್ಟಾರ್ ಗಣೇಶ್. ಅದೇ ವೇಳೆಗೆ ‘ ಗೀತಾ’ ಚಿತ್ರ ತಂಡದಿಂದ ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಳಿಸಲಾಯಿತು. ಎಸ್.ಎಸ್. ಫಿಲಂಸ್ ಹಾಗೂ ಗೋಲ್ಡನ್ ಮೂವೀಸ್ ಮೂಲಕ ಸೈಯದ್ ಸಲಾಂ ಹಾಗೂ ಶಿಲ್ಪ ಗಣೇಶ್ ‘ ಗೀತಾ’ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ‘ಗೀತಾ’ ಚಿತ್ರಕ್ಕೆ ನಿರ್ದೇಶಕ ಆನಂದ್ ರಾವ್ ಜೊತೆ ನಿರ್ದೇಶನದಲ್ಲಿ ಪಳಗಿದ ವಿಜಯ್ ನಾಗೇಂದ್ರ ನಿರ್ದೇಶಕ ರಾಗಿದ್ದಾರೆ. ಚಿತ್ರದ ಪೋಟೋಶೂಟ್ ಈಗಾಗಲೇ ನಡೆದಿದ್ದು, ಚಿತ್ರದಲ್ಲಿ ಹೆಸರಾಂತ ನಟ- ನಟಿಯರು ಅಭಿನಯಿಸಲಿದ್ದಾರೆಂದು ಚಿತ್ರತಂಡ ಹೇಳಿದೆ. ವಿ.ಹರಿಕೃಷ್ಣ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಶ್ರೀಶ ಕುದುವಳ್ಳಿ ಛಾಯಾ ಗ್ರಹಣವಿದೆ. ನಿರ್ದೇಶಕ ವಿಜಯ್ ನಾಗೇಂದ್ರ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಚಿತ್ರಕ್ಕೆ ನಾಯಕಿಯ ಹುಡುಕಾಟ ನಡೆಯುತ್ತಿದೆ.
ಸಂಬಂಧಿತ · Related
Buzz
Toxic Worldwide Release: Yash’s Character Posters, One by One
Buzz
ZEE5 Kannada Upcoming Originals: 8 New Titles Coming Soon
Buzz
Toxic Pre-Release Event: Rukmini Vasanth Speech Highlights
Buzz
‘ನೀ ನಂಗೆ ಅಲ್ಲವಾ’ ಮೊದಲ ಹಾಡು ‘ನೋ ನೋ…’ ಬಿಡುಗಡೆ
Buzz
ಭಾವಾಂತರ: ಕಾರ್ತಿಕ್ ಶರ್ಮರ ಕನಸು, ವಿಭಿನ್ನ ಪೋಸ್ಟರ್ಗೆ ಭಾರೀ ಚರ್ಚೆ
Buzz
ನಾಗಭೂಷಣ್ ಹೊಸ ಚಿತ್ರ: 90ರ ದಶಕದ ಕೌಟುಂಬಿಕ ಕಥೆ
Buzz
ಅಮೇರಿಕಾ ಅಮೇರಿಕಾ 2: ಹೊಸ ಕಥೆ, ಹಳೆಯ ಪ್ರೀತಿ!
Buzz
ಹುಬ್ಬಳ್ಳಿ ಹಂಟರ್ಸ್: ‘ಬೆಲ್ ಬಾಟಮ್’ ನಿರ್ಮಾಪಕರ ಹೊಸ ಸಿನಿಮಾ ಡಬ್ಬಿಂಗ್ ಪೂರ್ಣ
Buzz
Cocktail 2: Netflix Date for Romantic Comedy
📢 Never miss a Sandalwood updateNew movies, trailers & OTT updates — first.