flixOye
Short Films

Whisper Kannada Short Film

Whisper Kannada Short Film ಸಸ್ಪೆನ್ಸ್ ಥ್ರಿಲ್ಲರ್ ಜೊತೆ ಒಂದೊಳ್ಳೆ ಸಂದೇಶ ನೀಡುವ ‘ವಿಸ್ಪರ್’ Po

ಮನುಷ್ಯನ ಜೀವನದಲ್ಲಿ ಒತ್ತಡ, ಕೋಪಕ್ಕೆ ಹಲವು ಕಾರಣಗಳಿರುತ್ತೆ. ಕೆಲವೊಮ್ಮೆ ಈ ಕೋಪ, ಒತ್ತಡದಿಂದ ತಮ್ಮ ಜೀವನ ಮಹತ್ವದ ಕ್ಷಣಗಳನ್ನ ಹಾಗೂ ಮಹತ್ವದ ವ್ಯಕ್ತಿಗಳನ್ನೇ ಕಳೆದುಕೊಳ್ಳಬೇಕಾಗುತ್ತದೆ. ಕಳೆದುಕೊಂಡ ನಂತರ ಆ ನೋವನ್ನ ಬೇರೆಯದ್ದೇ ರೀತಿಯಲ್ಲಿ ಅನುಭವಿಸಬೇಕಾಗುತ್ತೆ.

Advertisement

ತಮ್ಮ ಜೀವನ ಸೊಗಸಾಗಿರಲೆಂದು, ಪ್ರೀತಿ ಸಂತಸದಿಂದ ತುಂಬಿರಲೆಂದು ಹೆಣ್ಣುಮಕ್ಕಳು ಏನೇನೋ ಕನಸು ತುಂಬಿಕೊಂಡಿರುತ್ತಾರೆ. ಆದರೆ, ಕೇಳುವ ವ್ಯವಧಾನ ಗಂಡನಿಗೆ ಇರಬೇಕಲ್ಲವೆ? ಕೋಪದ ಕೈಯಲ್ಲಿ ಸಂಬಂಧಗಳು ಮಾತ್ರವಲ್ಲ ಭವಿಷ್ಯವೂ ನಾಶವಾಗುತ್ತದೆ. ಇಂತಹ ಒಂದೊಳ್ಳೆ ಸಂದೇಶದೊಂದಿಗೆ ತಯಾರಾಗಿರುವ ಕಿರುಚಿತ್ರವೇ ‘ವಿಸ್ಪರ್’. ಹೇಮಾದ್ರಿ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬಂದಿರುವ ಈ ಕಿರುಚಿತ್ರವನ್ನ ಅರವಿಂದ್ ಸೇತುರಾಮ್ ರಚಿಸಿ, ನಿರ್ದೇಶನ ಮಾಡಿದ್ದಾರೆ. ಜೊತೆಗೆ ಅವರೇ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಈ ಕಿರುಚಿತ್ರ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ವೀಕ್ಷಕರ ಮೆಚ್ಚುಗೆ ಗಳಿಸಿಕೊಂಡಿದೆ.

ಸಂಬಂಧಿತ · Related