flixOye
Buzz

ಎ ಟಿ ಎಂ : ಅಟೆಂಪ್ಟ್ ಟು ಮರ್ಡರ್

ನಿಜ ಜೀವನದಲ್ಲಿ ನಡೆದ ಕಥೆಯನ್ನು ಆಧರಿಸಿ ಎ ಟಿ ಎಂ : ಅಟೆಂಪ್ಟ್ ಟು ಮರ್ಡರ್ ಕನ್ನಡ ಸಿನಿಮಾವನ್ನು ಎಸ್ ವಿ ನಾರಾಯಣ್ ಹಾಗೂ ಕೃಷ್ಣಮೂರ್ತಿ ಅವರು ನಿರ್ಮಾಣ ಮಾಡಿ ಪ್ರಣವ್ ಸ್ಟುಡಿಯೋ ಅಲ್ಲಿ ತಯಾರಾಗಿರುವ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಅತ್ಯಂತ ಕುತೂಹಲ ಹುಟ್ಟಿಸುವ ಚಿತ್ರದ ನಿರ್ದೇಶಕರು ಅಮರ್ ಗೌಡ.

ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಎ ಟಿ ಎಂ ಅಲ್ಲಿ ನಡೆದ ಹಲ್ಲೆಯನ್ನು ಇಟ್ಟುಕೊಂಡು ಅದಕ್ಕೆ ಒಂದು ಸಾಮಾಜಿಕ ಪರಿಕಲ್ಪನೆ ಜೊತೆಗೆ ಕುತೂಹಲ ಸಹ ಚಿತ್ರದುದ್ದಕ್ಕೂ ಕಥೆಯಲ್ಲಿ ರಚಿಸಿದ್ದಾರೆ ನಿರ್ದೇಶಕರು.
ಈ ಚಿತ್ರಕ್ಕೆ ನಿರ್ದೇಶಕ ಅಮರ್ ಗೌಡ ಅವರೇ ಕಥೆ ಹಾಗೂ ಚಿತ್ರಕಥೆಯನ್ನು ರಚಿಸಿದ್ದಾರೆ. ವಿನಯ್ ಗೌಡ, ಚಂದು, ಸೂರ್ಯ, ಶೋಭಿತ, ಹೇಮಲತಾ, ರಮಾಕಾಂತ್, ರಾಚಪ್ಪ, ಆರ್ಯ ಹಾಗೂ ಇನ್ನಿತರ ಕಲಾವಿದರು ಅಭಿನಯಿಸಿದ್ದಾರೆ.
ಎಸ್ ಕೆ ರಾವ್ ಛಾಯಾಗ್ರಹಣ, ರವಿ ದೇವ್ ಸಂಗೀತ ಹಾಗೂ ಜೀತ್ ಸಿಂಗ್ ಹಿನ್ನಲೆ ಸಂಗೀತ, ಸಂಕೇತ್ ಪೂಜಾರಿ ಸಂಕಲನ ಒದಗಿಸಿದ್ದಾರೆ.

ಸಂಬಂಧಿತ · Related