flixOye
Buzz

Samarjith Lankesh: ಇಂದ್ರಜಿತ್ ಲಂಕೇಶ್ ಮಗನ ಜೊತೆ ಹುಚ್ಚೆದ್ದು ಕುಣಿದು ‘ಕಿಸ್’ ಕೊಟ್ಟ ಉಪೇಂದ್ರ – ವೈರಲ್ ವಿಡಿಯೋ ಇಲ್ಲಿದೆ!

ಕನ್ನಡದ ಹೃತಿಕ್ ರೋಷನ್ ಎಂದು ಈಗಾಗಲೇ ಎಲ್ಲೆಡೆ ಫೇಮಸ್ ಆಗಿರುವ, ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜೀತ್ ಲಂಕೇಶ್ (Samarjith Lankesh) ತನ್ನ ಮೊದಲ ಕನ್ನಡ ಚಿತ್ರ ಗೌರಿ ಯಲ್ಲಿ ಬಣ್ಣ ಹಚ್ಚಿದ್ದಾರೆ.

Gauri Kannada Movie Samarjith Lankesh

ಆಗಸ್ಟ್ 15 ರಂದು ರಿಲೀಸ್ ಆಗಲಿರೋ ಈ ಚಿತ್ರಕ್ಕೆ ಈಗಾಗಲೇ ಹೈ ಲೆವೆಲ್ ಪ್ರೊಮೋಷನ್ ನಡೆಯುತ್ತಿದ್ದು, ಎಲ್ಲೆಲ್ಲೂ ಸಮರ್ಜೀತ್ ಅವರ ಬ್ಯಾನರ್ ರಾರಾಜಿಸುತ್ತಿದೆ.

Gauri Kannada Movie Samarjith Lankesh

ತನ್ನ ಮೊದಲ ಚಿತ್ರ ಗೌರಿ ಗೆ ಸಮರ್ಜಿತ್ ಹಾಗೂ ಅವರ ತಂದೆ ಇಂದ್ರಜಿತ್ ಲಂಕೇಶ್ ಜೊತೆಗೂಡಿ ಎಲ್ಲೆಡೆ ಪ್ರೊಮೋಷನ್ ನಡೆಸುತ್ತಿದ್ದು, ಈವೆಂಟ್ ಗಳು, ಶೋಗಳ ಮೂಲಕ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದ್ದಾರೆ. ಈಗಾಗಲೇ ಟ್ರೈಲರ್ 1.1 ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡಿದ್ದು, ಬಹಳ ನಿರೀಕ್ಷೆ ಹುಟ್ಟುಹಾಕಿದೆ.

 

ಹಳ್ಳಿಗಾಡಿನಿಂದ ಬಂದ ಯುವಕನ ಹಾಗೂ ಹುಡುಗಿಯ ಸುತ್ತ ಹೆಣೆದಿರುವ ಈ ಚಿತ್ರವನ್ನು ಸ್ವತಃ ಇಂದ್ರಜಿತ್ ಲಂಕೇಶ್ ಹಾಗೂ ಅನೀಶ್ ಅವರು ನಿರ್ದೇಶಿಸಿದ್ದಾರೆ. ಮುಖ್ಯಭೂಮಿಕೆಯಲ್ಲಿ ರಾಜೀವ್ ಪಿಳ್ಳೈ, ಪ್ರಿಯಾಂಕಾ ಉಪೇಂದ್ರ ಹಾಗೂ ಸಮರ್ಜೀತ್ ಲಂಕೇಶ್ ನಟಿಸಿದ್ದರೆ, ಸಮರ್ಜೀತ್ ಗೆ ನಾಯಕಿಯಾಗಿ ಪುಟ್ಟಗೌರಿ ಮದುವೆ ಹಾಗೂ ಬಿಗ್ ಬಾಸ್ ಖ್ಯಾತಿಯ ಸಾನ್ಯಾ ಅಯ್ಯರ್ ನಟಿಸಿದ್ದಾರೆ.

Gauri Kannada Movie Samarjith Lankesh

Samarjith Lankesh: ಕಿಸ್ ಕೊಟ್ಟ ರಿಯಲ್ ಸ್ಟಾರ್ ಉಪೇಂದ್ರ

ನಿನ್ನೆ ನಡೆದ ರಿಲೀಸ್ ಈವೆಂಟ್ ಒಂದರಲ್ಲಿ, ಸಮರ್ಜೀತ್ ಅವರೊಂದಿಗೆ ನಟ ರಿಯಲ್ ಸ್ಟಾರ್ ಉಪೇಂದ್ರ ಸ್ನೇಹಪೂರ್ವಕವಾಗಿ ಭಾಗವಹಿಸಿದ್ದಾರೆ. ಈವೆಂಟ್ ನಲ್ಲಿ ಸಮರ್ಜೀತ್ ಜೊತೆ ಹುಚ್ಚೆದ್ದು ಕುಣಿದ ವೀಡಿಯೋ ವೈರಲ್ ಆಗಿದೆ. ಚಂದನ್ ಶೆಟ್ಟಿಯವರ ಟೈಂ ಬರತ್ತೆ ಸಾಂಗ್ ಗೆ ಸಮರ್ಜೀತ್ ಜೊತೆ ಹೆಜ್ಜೆ ಹಾಕಿದ ಉಪೇಂದ್ರ, ಜೋಷ್ ನಲ್ಲಿ ಕುಣಿದು ಕೊನೆಗೆ ಸಮರ್ಜೀತ್ ಲಂಕೇಶ್ ಅವರನ್ನು ಹತ್ತಿರಕ್ಕೆ ಎಳೆದು ಕೆನ್ನೆಗೆ ಪ್ರೀತಿಯಿಂದ ಮುತ್ತಿಟ್ಟಿದ್ದಾರೆ.

ಉಪೇಂದ್ರ ಅವರು ಡ್ಯಾನ್ಸ್ ಮಾಡಿ ಕಿಸ್ ಕೊಟ್ಟ ವಿಡಿಯೋ ವೈರಲ್ ಆಗಿದ್ದು, ವಿಡಿಯೋ ಇಲ್ಲಿದೆ ನೋಡಿ:

 

View this post on Instagram

 

A post shared by F L I X O Y E (@flixoyein)

ಇಂದ್ರಜಿತ್ ಲಂಕೇಶ್ ಅವರೊಂದಿಗಿನ ಸ್ನೇಹ ಹಾಗೂ ಗೌರಿ ಚಿತ್ರದಲ್ಲಿ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿರುವುದರಿಂದ, ಉಪೇಂದ್ರ ಅವರು ಅತ್ಯಂತ ಆತ್ಮೀಯತೆಯಿಂದ ಚಿತ್ರಕ್ಕೆ ಶುಭಹಾರೈಸಿದ್ದು, ಕನ್ನಡದ ಹೃತಿಕ್ ರೋಷನ್ ಎಂದು ಈಗಾಗಲೇ ಫೇಮಸ್ ಆಗಿರುವ ಸಮರ್ಜೀತ್ ಗೆ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ: Abhishek Aishwarya Divorce – ನಾವು ಡಿವೋರ್ಸ್ ಪಡೆಯಲಿದ್ದೇವೆ ಎಂದ ಅಭಿಷೇಕ್‌ ಬಚ್ಚನ್ ವಿಡಿಯೋ ವೈರಲ್ – ಅಸಲಿಯತ್ತೇನು?

ಆಗಸ್ಟ್ 15 ರಂದು ಕನ್ನಡದ ಮೂರು ಬಿಗ್ ಸಿನಿಮಾಗಳು ರಿಲೀಸ್ ಆಗಲಿವೆ.  ಅದರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಕೃಷ್ಣಂ ಪ್ರಣಯ ಸಖಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಭೈರತಿ ರಣಗಲ್ ಹಾಗೂ ಸಮರ್ಜೀತ್ ಲಂಕೇಶ್ ಅಭಿನಯದ ಗೌರಿ ಚಿತ್ರ ಕೂಡ ಸೇರಿವೆ. ಥಿಯೇಟರ್ ಗೆ ಹೋಗಲು ಸಿನಿಪ್ರಿಯರಿಗೆ ರಜೆಗಳಂತೂ ಇವೆ.  ಫಿಲಂ ರಿಲೀಸ್ ಗೆ ಇದು ಒಳ್ಳೆಯ ಟೈಂ ಅನ್ನೋ ಕಾರಣಕ್ಕೆ ಮೂರೂ ಸಿನಿಮಾಗಳು ಒಂದೇ ದಿನ ರಿಲೀಸ್ ಆಗಲು ರೆಡಿಯಾಗಿವೆ.

 

ಇನ್ನು ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದೇ ಸಮರ್ಜೀತ್ ಲಂಕೇಶ್ ನಟನೆಯ ಗೌರಿ ಚಿತ್ರ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದ್ದು, ಲಂಕೇಶ್ ಕುಟುಂಬದ ಕುಡಿ ಚಿತ್ರರಂಗದಲ್ಲಿ ಸಕ್ಸಸ್ ಕಾಣಲಿ ಎನ್ನುವುದೇ ನಮ್ಮ ಹಾರೈಕೆ.

ಸಂಬಂಧಿತ · Related