ಬಹುಕೋಟಿ ವೆಚ್ಚದ ಪಾನ್ ಇಂಡಿಯಾ ಚಿತ್ರ ಟಾಕ್ಸಿಕ್ (Toxic Movie) ಸೆಟ್ಟೇರುತ್ತಿದೆ. ಗೀತು ಮೋಹನದಾಸ್ ನಿರ್ದೇಶನದ ಚಿತ್ರದ ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ ರಾಕಿಂಗ್ ಸ್ಟಾರ್ ಯಶ್.

ಕರೀನಾ ಕಪೂರ್, ಸಾಯಿ ಪಲ್ಲವಿ, ನವಾಜುದ್ದೀನ್ ಸಿದ್ದಿಕಿ, ಸಂಯುಕ್ತಾ ಮೆನನ್, ಶೈನ್ ಟಾಮ್ ಚಾಕೋ, ಡಾಲಿ ಧನಂಜಯ್, ಶ್ರುತಿ ಹಾಸನ್ ಮುಂತಾದ ಬಹುದೊಡ್ಡ ತಾರಾಗಣವೇ ಇರುವ ಯಶ್ ಮುಖ್ಯಭೂಮಿಕೆಯ ಈ ಟಾಕ್ಸಿಕ್ ಚಿತ್ರದ ಶೂಟಿಂಗ್ ಆರಂಭವಾಗಿದ್ದು, ತನ್ನ ಎಕ್ಸ್ ಖಾತೆ ಮೂಲಕ ಕೆ.ಜಿ.ಎಫ್ ಸ್ಟಾರ್ ಯಶ್ ಪಯಣ ಆರಂಭವಾಗಿದೆ ಎಂದು ಟ್ವೀಟ್ ಮಾಡಿ ಬಿಗ್ ಅಪ್ಡೇಟ್ ನೀಡಿದ್ದಾರೆ.
The journey begins 🎬 #Toxic pic.twitter.com/Ysqmr4xrpg
— Yash (@TheNameIsYash) August 8, 2024
Toxic Movie: ಸ್ವತಃ ಯಶ್ ನಿರ್ಮಾಣ
ಕೆ.ವಿ.ಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಸ್ವತಃ ಯಶ್ ಕೂಡ ನಿರ್ಮಾಪಕರಾಗಿದ್ದಾರೆ. ಚರಣ್ ರಾಜ್ ಸಂಗೀತವಿರುವ ಈ ಚಿತ್ರಕ್ಕೆ ಸಾಹಸವನ್ನು ಹಾಲಿವುಡ್ ಸ್ಟಂಟ್ ಡೈರೆಕ್ಟರ್ಗಳು ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ.
2025 ಕ್ಕೆ ಬಿಗ್ ಸ್ಕ್ರೀನ್ಗಳಲ್ಲಿ ಜಗತ್ತಿನಾದ್ಯಂತ ತೆರೆಕಾಣಲಿದೆ ಎನ್ನಲಾದ ಈ ಚಿತ್ರ ಯಶ್ ಸಿನಿಮಾ ಕೆರಿಯರ್ಗೆ ಇನ್ನೊಂದು ಬಿಗ್ ಸಕ್ಸಸ್ ಕೊಡೋದಂತೂ ಖಂಡಿತ.









