ಕೃಷ್ಣ ಕ್ರಿಯೇಷನ್ಸ್ ಮತ್ತು ಜಗದೀಶ್ ಫಿಲ್ಮ್ಸ್ ಬ್ಯಾನರ್‌ಗಳ ಅಡಿಯಲ್ಲಿ ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ನಿರ್ಮಿಸಿರುವ, ನಟ ದುನಿಯಾ ವಿಜಯ್ ಅವರ ನಿರ್ದೇಶನದ ಚಿತ್ರ ‘ಭೀಮಾ’ ಆಗಸ್ಟ್ 9 ರಂದು ತೆರೆಯ ಮುಂದೆ ಬರಲಿದೆ.
ಭೀಮಾ’ ಚಿತ್ರಕ್ಕೆ ವಿಜಯ್ ಕಥೆ ಬರೆದಿದ್ದು, ಮಾಸ್ತಿ ಉಪ್ಪಾರಹಳ್ಳಿ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದು, ಶಿವಸೇನಾ ಛಾಯಾಗ್ರಹಣ ಮಾಡಿದ್ದಾರೆ.
I love you kane ಲಿರಿಕಲ್ ವಿಡಿಯೋ ಯೂಟ್ಯೂಬ್ ನಲ್ಲಿ ದಾಖಲೆ ಮಾಡಿದೆ .
ಇದರಲ್ಲಿ ಅಶ್ವಿನಿ, ಬ್ಲ್ಯಾಕ್ ಡ್ರ್ಯಾಗನ್ ಮಂಜು, ಕಲ್ಯಾಣಿ ರಾಜು ಮತ್ತು ಗಿಲಿ ಗಿಲಿ ಚಂದ್ರು ಜೊತೆಗೆ ದುನಿಯಾ ವಿಜಯ್ ಸ್ವತಃ ನಟಿಸಿದ್ದಾರೆ.

ರಂಗಭೂಮಿ ಕಲಾವಿದೆ ಬೆಂಗಳೂರಿನ ಅಶ್ವಿನಿ, ಭೀಮ ಚಿತ್ರದ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ನವ ನಟಿ ಅಶ್ವಿನಿ ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ.ರಂಗಭೂಮಿ ಕಲಾವಿದೆ ಅನ್ನುವ ಕಾರಣಕ್ಕೆ ನಟ-ನಿರ್ದೇಶಕ ದುನಿಯಾ ವಿಜಯ್ ತಮ್ಮ ಈ ಚಿತ್ರಕ್ಕೆ ಅಶ್ವಿನಿ ಅವರನ್ನ ಆಯ್ಕೆ ಮಾಡಿದ್ದಾರೆ
ದುನಿಯಾ ವಿಜಯ್ ಅಭಿನಯದ ಭೀಮಾ ಚಿತ್ರದ “ಬೂಮ್ ಬೂಮ್ ಬೆಂಗಳೂರು” ಹಾಡು ಈಗ ಯುಟ್ಯೂಬ್‌ನಲ್ಲಿ ಟ್ರೆಂಡಿಂಗ್ ಆಗಿದೆ.
ನಟಿ ಕಲ್ಯಾಣಿ ಅವರು ‘ಜಯಮ್ಮನ ಮಗ’ ಚಿತ್ರದಲ್ಲಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದು, ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಕಲ್ಯಾಣಿ ರಾಜು ಅವರು ಭುಜಂಗ, ಫಾರ್ಚೂನರ್, ಎಂದೆದಿಗು, ಶ್ರೀದೇವಿ ಸೋಡಾ ಸೆಂಟರ್ ಮತ್ತು ಇತರ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಭೀಮ’ ಚಿತ್ರದ ಪ್ರಮುಖ ಪಾತ್ರಕ್ಕೆ ಜೀವ ತುಂಬಲು ಸಿದ್ಧರಾಗಿದ್ದಾರೆ.

ಅಕ್ಟೋಬರ್ 14, 2021 ರಂದು ಬಿಡುಗಡೆಯಾದ ‘ಸಲಗ’ ಚಿತ್ರದಲ್ಲಿ ಧನಂಜಯ ಪೋಲೀಸ್ ಪಾತ್ರದಲ್ಲಿ ನಟಿಸಿದ್ದರು ಮತ್ತು ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ನಟ ವಿಜಯ್ ನಿರ್ದೇಶಿಸಿ, ನಟಿಸಿದ ಭೀಮಾ ಚಿತ್ರ ವೀಕ್ಷಕರನ್ನು ಮನರಂಜಿಸಲು ಆಗಸ್ಟ್ 9 ರಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ.









