flixOye
Buzz

ಲವ್ಲಿ ಆಗಿ ಜನರ ಮನಸ್ಸು ಗೆದ್ದ ವಸಿಷ್ಟ ಸಿಂಹರ ಲವ್…ಲಿ

ಲವ್..ಲಿ ಚಿತ್ರವೂ ರೋಮ್ಯಾಂಟಿಕ್ ಆಕ್ಷನ್ ಎಂಟರ್‌ಟೈನ್‌ಮೆಂಟ್ ಸಿನಿಮಾ. ಲವ್‌…ಲಿ ಚಿತ್ರದಲ್ಲಿ ವಸಿಷ್ಠ ಸಿಂಹ ರವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಚೇತನ್‌ ಕೇಶವ್‌ ರವರು ನಿರ್ದೇಶನ ಮಾಡಿದ್ದು, ಅಭುವನಸ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಶ್ರೀ ರವೀಂದ್ರ ಕುಮಾರ್ ರವರು ನಿರ್ಮಾಣ ಮಾಡಿದ್ದಾರೆ.

 

ಚಿತ್ರಕ್ಕೆ ಜೆ.ಅನೂಪ್ ಸೀಳಿನ್ ರವರು ಸಂಗೀತ ಸಂಯೋಜಿಸಿದ್ದು, ಹರೀಶ್ ಕೊಮ್ಮೆ ರವರ ಸಂಕಲನವಿದೆ ಹಾಗೂ ಚಿತ್ರಕ್ಕೆ ಅಶ್ವಿನ್ ಕೆನಡಿರವರು ಛಾಯಾಗ್ರಹಣವನ್ನು ಮಾಡಿದ್ದಾರೆ. ಚಿತ್ರದಲ್ಲಿ ವಶಿಷ್ಠ ಸಿಂಹ ರವರು ನಾಯಕ ನಟನಾಗಿ ಕಾಣಿಸಿಕೊಂಡಿದ್ದರೆ, ಸ್ಟೆಫಿ ಪಟೇಲ್, ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್, ಸಾಧು ಕೋಕಿಲ, ಸಮೀಕ್ಷಾ, ಜಿರಳೆ ಸುಧೀರ್, ಹರಿಹರ ಗುಂಡೂರಾವ್ ದತ್ತಾತ್ರೇಯ, ಕಾವ್ಯ ಶೆಟ್ಟಿ ರವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

 

ಈ ಚಿತ್ರದಲ್ಲಿ ವಶಿಷ್ಠ ಸಿಂಹ ರವರು ಅನಾಥನಾಗಿ ಹಾಗೂ ಗ್ಯಾಂಗ್‌ಸ್ಟರ್‌ ಆಗಿ ಕಾಣಿಸಿಕೊಂಡಿದ್ದಾರೆ ಹಾಗೂ ಇದು ರೊಂಮ್ಯಾಂಟಿಕ್‌ ಚಿತ್ರವಾಗಿದೆ. ಚಿತ್ರದ ಚಿಕಿಮಿಕಿ ಗೀತೆಯನ್ನು ಗಾಯಕಿ ಮಂಗ್ಲಿ ರವರು ಹಾಡಿದ್ದು, 23 ಮೇ ಸಂಜೆ 05:55 ಕ್ಕೆ ಬಿಡುಗಡೆ ಮಾಡಲಾಗಿತ್ತು.

https://www.instagram.com/reel/C8WwWwyix7Z/?igsh=eG1rZW9iYXRucHhy

ಲವ್‌…ಲಿ ಚಿತ್ರದ ಟೀಸರ್‌ 04 ಜೂನ್‌ ರಂದು ಬಿಡುಗಡೆಯಾಗಿದ್ದು, ಚಿತ್ರದ ಟ್ರೈಲರ್ ಲಾಂಚ್ ಮತ್ತು ಪ್ರಿ ರಿಲೀಸ್ ಈವೆಂಟ್‌ಗೆ ವಿಶೇಷ ಅತಿಥಿಯಾಗಿ ರಿಷಭ್‌ ಶೆಟ್ಟಿ ರವರು ಭಾಗವಹಿಸಿ ಟ್ರೈಲರ್‌ ಲಾಂಚ್‌ ಮಾಡಿದ್ದಾರೆ. ಚಿತ್ರದ ಟ್ರೈಲರ್ ನೋಡಿ ಡಾರ್ಲಿಂಗ್‌ ಕೃಷ್ಣ, ಕಾವ್ಯ ಶೆಟ್ಟಿ, ರಿಷಭ್‌ ಶೆಟ್ಟಿ, ಸಿಂಪಲ್‌ ಸುನಿ ಸೇರಿ ಅನೇಕರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

https://www.instagram.com/reel/C8bX_Q8PD2l/?igsh=MWNqdTdmZ3U2djB3Nw==

ಚಿತ್ರವು ಜೂನ್‌ 14 ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದ್ದು, ಈಗಾಗಲೇ ಬ್ಲಾಕ್‌ಬಸ್ಟರ್ ರೀತಿಯಲ್ಲಿ ಚಿತ್ರಮಂದಿರಗಳಲ್ಲಿ ಓಡುತ್ತಿದೆ. ಕೊನೆಯ ಸೀನ್ ಅಂತೂ ಅದ್ಭುತ ಎನ್ನುತ್ತಿರುವ ಫ್ಯಾನ್ಸ್, ವಶಿಷ್ಠರವರ ರೊಮ್ಯಾಂಟಿಕ್ ಪಾತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನೀವೂ ಲವ್…ಲಿ ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿ, ಕನ್ನಡ ಚಿತ್ರರಂಗವನ್ನು ಪ್ರೋತ್ಸಾಹಿಸಿ.

ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ http://flixoye.com ನ್ನು ಫಾಲೋ ಮಾಡಿ

ಸಂಬಂಧಿತ · Related