flixOye
Buzz

ಬೆಟ್ಟದ ದಾರಿಗೆ ಮೊದಲಹಂತ ಮುಕ್ತಾಯ

ಹಳ್ಳಿಯ ಮಕ್ಕಳ ಸಾಹಸದ ಕಥಾನಕವನ್ನು ಹೊಂದಿರುವ ಬೆಟ್ಟದ ದಾರಿ ಚಿತ್ರದ ಮೊದಲ ಹಂತದ ಚಿತ್ರೀಕರಣ ಇದೀಗ ಮುಕ್ತಾಯಗೊಂಡಿದೆ. ಈ ಹಿಂದೆ ಬಂಗಾರಿ, ಶಿವನಪಾದ ಚಿತ್ರಗಳಿಗೆ ಆಕ್ಷನ್-ಕಟ್ ಹೇಳಿದ್ದ ಮಾಚಂದ್ರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಬಿಜಾಪುರ ಹಾಗೂ ಹತ್ತಿನಹಾಳ ಸುತ್ತಮುತ್ತಲ ಭಾಗದಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಸಿರುವ ಚಿತ್ರತಂಡ ದೊಡ್ಡಬಳ್ಳಾಪುರದ ಸುತ್ತಮುತ್ತ ಎರಡನೇ ಹಂತದ ಚಿತ್ರೀಕರಣವನ್ನು ಈ ತಿಂಗಳ ಕೊನೇ ವಾರದಿಂದ ಆರಂಭಿಸಲಿದೆ.

ಹೀರಾಲಾಲ್ ಮೂವೀಸ್ ಬ್ಯಾನರ್‍ನಲ್ಲಿ ಚಂದ್ರಕಲಾ ಟಿ.ಆರ್. ಮತ್ತು ಮಂಜುನಾಥ್ ನಾಯಕ್ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ನಂದಕುಮಾರ್ ಛಾಯಾಗ್ರಹಣ, ವೀರ್ ಸಮರ್ಥ್ ಸಂಗೀತ, ಅರ್ಜುನ್ (ಕಿಟ್ಟಿ) ಸಂಕಲನ, ಡಾ. ವಿ. ನಾಗೇಂದ್ರ ಪ್ರಸಾದ್, ವಿಜಯ್ ಭರಮ ಸಾಗರ, ಕೆ. ಕಲ್ಯಾಣ್ ಸಾಹಿತ್ಯ, ಕಂಬಿ ರಾಜ್ ನೃತ್ಯ ನಿರ್ದೇಶನ, ಸತೀಶ್ ಕಲಾ ನಿರ್ದೇಶನವಿದೆ. ಮಾ. ನಿಶಾಂತ್ ಟಿ. ರಾಠೋಡ್, ಮಾ. ಅಂಕಿತ ನವನಿಧಿ, ಬೇಬಿ ಲಕ್ಷ್ಮಿ ಶ್ರೀ, ಮಾ. ರಂಗಸ್ವಾಮಿ, ಮಾ. ರೋಹಿತ್ ಗೌಡ, ರಮೇಶ್ ಭಟ್, ಬ್ಯಾಂಕ್ ಜನಾರ್ಧನ್, ಉಮೇಶ್, ಮಾ. ವಿಘ್ನೇಶ್, ಬೇಬಿ ಮಾನ್ಯತಾ ಎಂ. ನಾಯಕ್, ಮೈಸೂರ್ ಮಲ್ಲೇಶ್, ನಿಶ್ಚಿತಾ ರಾಘವೇಂದ್ರ, ಗಂಗಾಧರ್ ಗೌಡ, ಆರ್. ನಾಗೇಶ್ ತಾರಾಬಳಗದಲ್ಲಿದ್ದಾರೆ.

ಸಂಬಂಧಿತ · Related