flixOye
Buzz

ಅಪ್ಪು ಅಗಲುವಿಕೆಯ ನೋವಿನಲ್ಲೇ ಜೇಮ್ಸ್ ಚಿತ್ರದ ಚಿತ್ರೀಕರಣ ಮುಗಿಸಿದ ಚಿತ್ರತಂಡ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಹುನಿರೀಕ್ಷಿತ ಚಿತ್ರ ಜೇಮ್ಸ್. ಈ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದು ಕೊನೆಯ ಹಂತ ತಲುಪಿರುವ ಸಂಧರ್ಭದಲ್ಲೇ ಅಪ್ಪು ರವರ ನಿಧನ ಚಿತ್ರರಂಗಕ್ಕೆ ದೊಡ್ಡ ಅಘಾತವನ್ನೇ ಉಂಟು ಮಾಡಿತ್ತು. ಜೇಮ್ಸ್ ಇದು ಪುನೀತ್ ಅಭಿನಯದ ಕೊನೆಯ ಚಿತ್ರ. ಇದೀಗ ಚಿತ್ರತಂಡ ಅವರ ಅಗಲುವಿಕೆಯ ನೋವಿನಲ್ಲೇ ಚಿತ್ರೀಕರಣ ಮುಗಿಸಿದೆ. ಚೇತನ್ ಕುಮಾರ್ ನಿರ್ದೇಶನದ ಕಿಶೋರ್ ಪತಿಕೊಂಡ ನಿರ್ಮಾಣದ ಈ ಚಿತ್ರದಲ್ಲಿ ಅವರ ಅಣ್ಣಂದಿರಾದ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ತಮ್ಮನಿಗೆ ಗೌರವ ಸೂಚಿಸಿದ್ದಾರೆ. ಜೇಮ್ಸ್ ಚಿತ್ರದ ಕೊನೆಯ ದಿನದ ಶೂಟಿಂಗ್‌ ಸೆಟ್‌ನಲ್ಲಿ ಶಿವರಾಜ್‌ಕುಮಾರ್ , ರಾಘವೇಂದ್ರ ರಾಜ್‌ಕುಮಾರ್, ರಾಘಣ್ಣ ಪುತ್ರ ಯುವ ರಾಜ್‌ಕುಮಾರ್, ರಾಮ್‌ಕುಮಾರ್ ಪುತ್ರ ಧೀರೇನ್ ಕೊನೆಯ ದಿನದ ಶೂಟಿಂಗ್ ಸೆಟ್‌ನಲ್ಲಿ ಭಾಗವಹಿಸಿದ್ದರು.

ಪುನೀತ್ ಭೌತಿಕವಾಗಿ ಅಗಲಿದರೂ ಭಾವನಾತ್ಮಕವಾಗಿ ನಮ್ಮ ಹೃದಯದಲ್ಲಿದ್ದಾರೆಂದು ಅವರ ಫೋಟೋದ ಮುಂದೆ ಚಿತ್ರತಂಡದವರೆಲ್ಲರೂ ಸೇರಿ ಚಿತ್ರೀಕರಣದ ಕೊನೆಯ ದಿನ ಕುಂಬಳಕಾಯಿ ಒಡೆದು ಚಿತ್ರತಂಡ ಫೋಟೋ ತೆಗೆಸಿಕೊಂಡಿದ್ದೆ.

ಶಿವರಾಜ್ ಕುಮಾರ್ ಅವರಿಂದ ಅಪ್ಪುಗೆ ಡಬ್ಬಿಂಗ್ ಮಾಡಲು ಚಿತ್ರ ತಂಡ ಚಿಂತನೆ ನಡೆಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ವರ್ಷ ಪುನೀತ್​ ರಾಜ್​ಕುಮಾರ್​ ಹುಟ್ಟುಹಬ್ಬದ ದಿನವೇ (ಮಾ.17) ‘ಜೇಮ್ಸ್​’ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ.

ಸಂಬಂಧಿತ · Related