flixOye
Buzz

Pradeep Raj: ‘ಕಿರಾತಕ’ ನಿರ್ದೇಶಕ ಪ್ರದೀಪ್ ರಾಜ್ ಇನ್ನಿಲ್ಲ

Pradeep Raj: ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಕಿರಾತಕ’ ಚಿತ್ರದ ನಿರ್ದೇಶಕ ಪ್ರದೀಪ್ ರಾಜ್ ಇಂದು ನಿಧನರಾಗಿದ್ದಾರೆ. ಕಳೆದ ಐದು ತಿಂಗಳಿನಿಂದ ಅನಾರೋಗ್ಯ ಪೀಡಿತರಾಗಿದ್ದ ಪ್ರದೀಪ್ ರಾಜ್ (46) ಇಂದು ಮುಂಜಾನೆ ಪಾಂಡಿಚೇರಿಯಲ್ಲಿ ಇಹಲೋಕ ತ್ಯಜಿಸಿರುವುದಾಗಿ ಪ್ರದೀಪ್ ಸಹೋದರ ಪ್ರಶಾಂತ್ ತಿಳಿಸಿದ್ದಾರೆ.

ಮಧುಮೇಹ ರೋಗಿಯಾಗಿದ್ದ ಪ್ರದೀಪ್ ರಾಜ್ ಅವರಿಗೆ ಕೊರೊನಾ ಬಂದಾಗ ತೀವ್ರ ಅನಾರೋಗ್ಯ ಉಂಟಾಗಿತ್ತು. ಬಳಿಕ ಬಹುಅಂಗಾಗ ವೈಫಲ್ಯ ಎದುರಿಸಬೇಕಾಗಿ ಬಂದ ಕಾರಣ ಮತ್ತೆ ಚೇತರಿಸಿಕೊಳ್ಳಲಿಲ್ಲ. ಹೊಸಮುಖಗಳನ್ನು ಇರಿಸಿಕೊಂಡು ಪ್ರದೀಪ್ ರಾಜ್ ಕಿರಾತಕ-2 ಚಿತ್ರ ರೆಡಿ ಮಾಡಿದ್ದು ಬಿಡುಗಡೆಗೆ ತಯಾರಾಗಿ ನಿಂತಿದೆ. ಪ್ರದೀಪ್ ರಾಜ್ ಅವರು ಈ‌ ಹಿಂದೆ ಬೆಂಗಳೂರು 560023, ಕಿಚ್ಚು, ಮಿಸ್ಟರ್ 420, ನೀನಾಸಂ ಸತೀಶ್ ನಟನೆಯ ಅಂಜದ ಗಂಡು, ದುನಿಯಾ ವಿಜಯ್ ನಟನೆಯ ರಜನಿಕಾಂತ ಚಿತ್ರಗಳನ್ನು ನಿರ್ದೇಶಿಸಿದ್ದರು.

ಪ್ರದೀಪ್ ರಾಜ್ ಮೂಲತಃ ಪಾಂಡಿಚೇರಿಯವರಾಗಿದ್ದು ಪತ್ನಿ ಮತ್ತು
ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಸಂಜೆ ಪಾಂಡಿಚೇರಿಯಲ್ಲೇ ನೆರವೇರಲಿರುವುದಾಗಿ ತಿಳಿಸಿದ್ದಾರೆ.

ಸಂಬಂಧಿತ · Related