flixOye
Buzz

ಧನ್ವೀರ್‌ ಬರ್ತ್‌ಡೇಗೆ ‘ಬೈ ಟು ಲವ್‌’ ಸರ್ಪೈಸ್‌

ಹರಿ ಸಂತೋಷ್‌ ಆ್ಯಕ್ಷನ್‌ ಕಟ್‌ ಹೇಳಿರುವ ‘ಬೈ ಟು ಲವ್‌’ ಟಾಕಿ ಭಾಗದ ಚಿತ್ರೀಕರಣ ಮುಗಿಸಿದೆ. ‘ಬಜಾರ್‌’ ಬಳಿಕ ಧನ್ವೀರ್‌ ನಟಿಸುತ್ತಿರುವ ಎರಡನೇ ಸಿನಿಮಾ ಇದಾಗಿದ್ದು, ಇತ್ತೀಚೆಗೆ ಬಿಡುಗಡೆಯಾದ ಫಸ್‌್ಟಲುಕ್‌ ಮೂಲಕ ಸಾಕಷ್ಟು ಕುತೂಹಲ ಮೂಡಿಸಿತ್ತು ಚಿತ್ರತಂಡ. ಧನ್ವೀರ್‌-ಶ್ರೀಲೀಲಾ ಹಾಗೂ ಪುಟ್ಟ ಮಗುವೊಂದು ಹಸೆಮಣೆ ಮೇಲೆ ಕುಳಿತಿರುವ ಫೋಟೋವೊಂದು ಎಲ್ಲೆಡೆ ವೈರಲ್‌ ಆಗಿತ್ತು. ಸೆಪ್ಟೆಂಬರ್‌ 8ರಂದು ಚಿತ್ರದ ನಾಯಕ ಧನ್ವೀರ್‌ ಹುಟ್ಟುಹಬ್ಬ. ಅಂದಿನ ವಿಶೇಷವಾಗಿ ಚಿತ್ರತಂಡದಿಂದ ವಿಶೇಷ ಉಡುಗೊರೆ ನೀಡಲು ಸಜ್ಜಾಗಿದೆ. ಆದರೆ ಅದು ಏನೆಂಬುದನ್ನು ಈಗಲೇ ಗುಟ್ಟು ಬಿಟ್ಟುಕೊಡಲು ಸಿದ್ಧವಿಲ್ಲ ಚಿತ್ರತಂಡ.

ಧನ್ವೀರ್‌ ಹುಟ್ಟುಹಬ್ಬಕ್ಕೆ ಸರ್ಪೈಸ್‌ ನೀಡುವ ಸಲುವಾಗಿ ಚಿತ್ರತಂಡ ಕುತೂಹಲಕಾರಿ ಕಂಟೆಂಟ್‌ ಸಿದ್ಧಪಡಿಸಿದ್ದು, ಅದನ್ನು ಹುಟ್ಟುಹಬ್ಬದಂದೇ ರಿವೀಲ್‌ ಮಾಡುವ ಯೋಜನೆ ಹಾಕಿಕೊಂಡಿದೆ. ಮೊದಲ ಚಿತ್ರದಲ್ಲಿ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ಧನ್ವೀರ್‌ಗಿಲ್ಲಿ ಲವರ್‌ ಬಾಯ್‌ ಪಾತ್ರ ನೀಡಲಾಗಿದೆ. ಜತೆಗೆ ಫ್ಯಾಮಿಲಿ ಮ್ಯಾನ್‌ ಕೂಡ ಆಗಿದ್ದಾರಾ ಎಂಬುದು ಫಸ್‌್ಟಲುಕ್‌ ಪೋಸ್ಟರ್‌ ನೋಡಿದವರಿಗೆ ಅನಿಸದೇ ಇರದು. ಇದೀಗ ಚಿತ್ರತಂಡದಿಂದ ಹೊರಬರುತ್ತಿರುವ ಮತ್ತೊಂದು ಕಂಟೆಂಟ್‌ ಬಗ್ಗೆ ಅಭಿಮಾನಿಗಳಲ್ಲಿ ತೀವ್ರ ಕುತೂಹಲವಿದೆ.

ಸುಮಾರು 70 ದಿನಗಳಿಗೂ ಹೆಚ್ಚು ಕಾಲ ಚಿತ್ರೀಕರಣ ನಡೆಸಿದೆ ಚಿತ್ರತಂಡ. ಧನ್ವೀರ್‌ ಹಾಗೂ ಶ್ರೀಲೀಲಾ ಜೋಡಿ ತೆರೆಯ ಮೇಲೆ ಮೋಡಿ ಮಾಡಲಿದೆ ಎಂಬುದು ನಿರ್ದೇಶಕರ ಅನಿಸಿಕೆ. ಗಣೇಶ್‌ ನಟನೆಯ ಸಖತ್‌, ನಿಖಿಲ್‌ ಕುಮಾರ್‌ಸ್ವಾಮಿ ನಟನೆಯ ಹೊಸ ಸಿನಿಮಾ ಹಾಗೂ ಜೋಗಿ ಪ್ರೇಮ್‌-ಧ್ರುವ ಸರ್ಜಾ ಕಾಂಬಿನೇಷನ್‌ ಸಿನಿಮಾಗಳನ್ನು ನಿರ್ಮಿಸುತ್ತಿರುವ ಕೆವಿಎನ್‌ ಪ್ರೊಡಕ್ಷನ್ಸ್ ‘ಬೈ ಟು ಲವ್‌’ಗೆ ಬಂಡವಾ ಹೂಡಿದೆ. ಚಿತ್ರದ ಕಥೆ ಮೆಚ್ಚಿಕೊಂಡು ಈ ಸಿನಿಮಾ ನಿರ್ಮಾಣ ಮಾಡಲು ಮುಂದಾದ ಕೆವಿಎನ್‌ ಪ್ರೊಡಕ್ಷನ್ಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾದ ಎರಡನೇ ಸಿನಿಮಾವಿದು. ಮಹೇಂದ್ರ ಸಿಂಹ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಸಂಗೀತ ಹಾಗೂ ಯೋಗಾನಂದ್‌ ಸಂಭಾಷಣೆ ಈ ಚಿತ್ರಕ್ಕಿದೆ.

‘ಈ ಸಿನಿಮಾ ಶುರುವಾಗಲು ಮುಖ್ಯ ಕಾರಣ ಕಥೆ. ಒನ್‌ಲೈನ್‌ ಕೇಳಿದ ನಿರ್ಮಾಪಕರು, ಒಂದೇ ಸಿಟ್ಟಿಂಗ್‌ನಲ್ಲಿ ಪೂರ್ತಿ ಕಥೆ ಕೇಳಿ ಓಕೆ ಮಾಡಿದರು. ಆನಂತರವಷ್ಟೇ ತಾರಾಗಣ, ತಾಂತ್ರಿಕವರ್ಗ ಅಂತಿಮವಾಗಿದ್ದು. ಈಗ ಟಾಕಿ ಪೋರ್ಷನ್‌ ಮುಗಿಸಿದ್ದೇವೆ. ಎಲ್ಲವೂ ಅಂದುಕೊಂಡದ್ದಕ್ಕಿಂತ ನೀಟಾಗಿ ಮೂಡಿಬಂದಿದೆ. ಎಲ್ಲರ ಸಹಕಾರದಿಂದ ಶೂಟಿಂಗ್‌ ಬೇಗ ಮುಗಿಸಲು ಸಾಧ್ಯವಾಯ್ತು. ಈ ಚಿತ್ರದಲ್ಲಿ ಧನ್ವೀರ್‌-ಶ್ರೀಲೀಲಾ ಕಾಂಬಿನೇಷನ್‌ ಅದ್ಭುತವಾಗಿ ಮೂಡಿಬಂದಿದೆ. ಅದನ್ನು ಸಿನಿಮಾ ನೋಡಿಯೇ ಅನುಭವಿಸಬೇಕು. 8 ತಿಂಗಳ ಮಗು ಕೂಡ ಪ್ರಮುಖ ಪಾತ್ರಧಾರಿ. ಚಿತ್ರದಲ್ಲಿ ಸಾಕಷ್ಟು ಕುತೂಹಲಕಾರಿ ಅಂಶಗಳಿವೆ. ಇದು ಈಗಿನ ಟ್ರೆಂಡ್‌ಗೆ ತಕ್ಕಂತೆ ಮಾಡಿದ ಕಥೆ. ಹೀಗಾಗಿ ಎಲ್ಲರಿಗೂ ಕನೆಕ್‌್ಟ ಆಗುವಲ್ಲಿ ಎರಡು ಮಾತಿಲ್ಲ’ ಅಂತಾರೆ ನಿರ್ದೇಶಕ ಹರಿ ಸಂತೋಷ್‌.

ಸಂಬಂಧಿತ · Related