flixOye
Buzz

‘ಎಂಆರ್’ ಸಿನಿಮಾವನ್ನು ಕೈಬಿಟ್ಟ‌ ನಿರ್ದೇಶಕ ರವಿ ಶ್ರೀವತ್ಸ

ನಿರ್ದೇಶಕ ‌ರವಿ ಶ್ರೀವತ್ಸ ಮುತ್ತಪ್ಪ ರೈ ಬಗ್ಗೆ ಸಿನಿಮಾ ಮಾಡಲು ಹೊರಟಿರುವ ವಿಷಯ ಎಲ್ಲರಿಗೂ ತಿಳಿದಿದೆ. ಈ‌ ಸಿನಿಮಾ‌ದ ಮೂಲಕ‌ ಸ್ಯಾಂಡಲ್‌ವುಡ್ ಗೆ ನಿರ್ಮಾಪಕ ‌ರಾಜಣ್ಣ ಅವರ ಪುತ್ರ ದೀಕ್ಷಿತ್ ಎಂಆರ್‌ ಗೆ ನಾಯಕನಾಗಿ‌ ಎಂಟ್ರಿ ಕೊಡುತ್ತಿದ್ದಾರೆ. ಖಾಸಗಿ ರೆಸಾರ್ಟ್ ನಲ್ಲಿ ಹೆಲಿಕಾಪ್ಟರ್ ತರಿಸಿ, ಕೆಲವು‌ ಕಲಾವಿದರನ್ನು ಹಾಕಿಕೊಂಡು‌ ಪೋಟೋಶೂಟ್ ಮಾಡಿ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನ್ನು ರಿಲೀಸ್ ಮಾಡಿದ್ದರು‌ ರವಿ ಶ್ರೀವತ್ಸ.

‘ಸೂಪರ್ ಸ್ಟಾರ್’ಗೆ ಸಿಕ್ಕಳು ಅಸ್ಸಾಂ ಬೆಡಗಿ

ಅಷ್ಟರಲ್ಲೇ ಚಿತ್ರತಂಡ‌ದ‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನಿರ್ಮಾಪಕ ಪದ್ಮನಾಭ್ ಮುತ್ತಪ್ಪ ರೈ ಅವರ ಬಯೋಪಿಕ್‌ ಮಾಡಲು ನನ್ನ ಬಳಿ‌ ರೈಟ್ಸ್ ಇದೆ. ಆ ಸಿನಿಮಾ ಯಾರು‌ ಮಾಡುವಂತಿಲ್ಲ ಎಂದಿದ್ದಾರೆ. ಈ‌ ಹಿಂದೆ 2016 ರಲ್ಲಿ ರಾಮ್ ಗೋಪಾಲ್ ‌ವರ್ಮಾ ವಿವೇಕ್ ಒಬೆರಾಯ್ ನ‌ ಹಾಕಿಕೊಂಡು‌ ಸಿನಿಮಾ ಮಾಡುವ ಬಗ್ಗೆ ದೊಡ್ಡ ಸುದ್ದಿಯಾಗಿತ್ತು. ಅದರೆ ಅದು‌ ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು. ಅದರೆ ಆ ಸಿನಿಮಾವನ್ನು ನಾವು ಮಾಡೇ ಮಾಡುತ್ತೇವೆ. ಬೇರೆಯವರು ಆ ಸಿನಿಮಾ ಮಾಡಬಾರದು ಎಂದು‌ ತಾಕೀತು‌ ಮಾಡಿದ್ದಾರೆ.

Rajatantra : ರಾಘವೇಂದ್ರ ರಾಜ್‍ಕುಮಾರ್ ನಟಿಸಿರುವ ‘ರಾಜತಂತ್ರ’ ಜನವರಿ 1 ಬಿಡುಗಡೆ

ಇತ್ತೀಚಿಗೆ ಮುತ್ತಪ್ಪ‌ ರೈ ಪುತ್ರ ವಿಕ್ಕಿ ರೈ, ಎಂಆರ್ ಸಿನಿಮಾ ಮಾಡಲು ಅನುಮತಿ ಕೊಡಬಾರದೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ಪತ್ರ ಬರೆದಿದ್ದು, ಈ ವಿಷಯ ತಿಳಿದ ಚಿತ್ರತಂಡ ಪತ್ರಿಕಾಗೋಷ್ಠಿ ನಡೆಸಿ ಎಂಆರ್ ತಂಡ ಮುತ್ತಪ್ಪ ರೈ ಬಯೋಪಿಕ್ ಚಿತ್ರವನ್ನು ಕೈ ಬಿಟ್ಟಿದ್ದೇವೆ. ಅದರ ಬದಲು ಡಿಆರ್ ಸಿನಿಮಾ‌ ಮಾಡುತ್ತೇವೆ‌ ಎಂದು ಹೇಳಿದೆ ಚಿತ್ರತಂಡ.

ಸಂಬಂಧಿತ · Related