flixOye
Buzz

ಜಗ್ಗೇಶ್ ಮತ್ತು‌ ಗುರುಪ್ರಸಾದ್ ಕಾಂಬಿನೇಷನ್‌ನಲ್ಲಿ‌ ‘ರಂಗನಾಯಕ’

ನವರಸನಾಯಕ‌ ಜಗ್ಗೇಶ್ ಹಾಗೂ ನಿರ್ದೇಶಕ ಗುರುಪ್ರಸಾದ್ ಕಾಂಬಿನೇಷನ್ ನಲ್ಲಿ‌ ಮೂಡಿಬರುತ್ತಿರುವ ‘ರಂಗನಾಯಕ’ ಸಿನಿಮಾ ಮುಹೂರ್ತ ಕಾರ್ಯಕ್ರಮ ಬಸವನಗುಡಿಯ ರಾಯರ ಮಠದಲ್ಲಿ ನೆರವೇರಿದ್ದು, ಚಿತ್ರದ ಚಿತ್ರೀಕರಣ ಜನವರಿಯಲ್ಲಿ ಆರಂಭವಾಗಲಿದೆ.

‘ಮಠ’, ‘ಎದ್ದೇಳು ಮಂಜುನಾಥ’ ಚಿತ್ರದ ಬಳಿಕ ಜಗ್ಗೇಶ್ – ಗುರುಪ್ರಸಾದ್ ಜೋಡಿ ‘ರಂಗನಾಯಕ’ ಚಿತ್ರದ ಮೂಲಕ‌ ಮತ್ತೆ ಒಂದಾಗಿದ್ದು, ವಿಖ್ಯಾತ್ ಪ್ರೊಡಕ್ಷನ್ ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ ಸಂಗೀತ‌ ನಿರ್ದೇಶಕ ‌ಅನೂಪ್ ಸೀಳಿನ್ ಸಂಗೀತ‌ ನೀಡಿದ್ದಾರೆ. ಗುರುಪ್ರಸಾದ್ ಮತ್ತೆ ಅನೂಪ್ ಸೀಳಿನ್ ಕಾಂಬಿನೇಷನ್‌ನಲ್ಲಿ‌ ‘ಎದ್ದೇಳು ಮಂಜುನಾಥ’, ‘ಡೈರೆಕ್ಟರ್ ಸ್ಪೆಷಲ್’, ಹಾಗೂ‌ ‘ಎರಡನೇ ಸಲ’ ಈ ಮೂರು‌ ಸಿನಿಮಾಗಳಿಗೆ ಅನೂಪ್ ಸೀಳಿನ್ ಸಂಗೀತ‌‌ ನೀಡಿದ್ದಾರೆ.

ಸಂಬಂಧಿತ · Related