ಜಯತೀರ್ಥ, ಪವನ್ ಕುಮಾರ್, ಯೋಗರಾಜ್ ಭಟ್, ಶಶಾಂಕ್ ಹಾಗೂ ಕೆ.ಎಂ.ಚೈತನ್ಯ ಈ ಐದು ಕನ್ನಡದ ಸ್ಟಾರ್ ಡೈರೆಕ್ಟರ್ ಒಟ್ಟಿಗೆ ಸೇರಿ ಪ್ರಯೋಗಾತ್ಮಕ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಸುದೀಪ್ ಮಾಡಬೇಕಿದ್ದ ಪಾತ್ರಕ್ಕೆ ರಾಣಾ ದಗ್ಗುಬಾಟಿ
ಈಗಾಗಲೇ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು, ಚಿತ್ರದಲ್ಲಿ ನಟ ರಿಷಿ ಹಾಗೂ ‘ಕನ್ನಡತಿ’ ಸೀರಿಯಲ್ ಖ್ಯಾತಿಯ ರಂಜನಿ ರಾಘವನ್ ಅಭಿನಯಿಸುತ್ತಿದ್ದಾರೆ. ನಟ ರಿಷಿ ಪೊಲೀಸ್ ಅಧಿಕಾರಿ ಗೆಟಪ್ ನಲ್ಲಿ ಕಾಣಿಸಿಕೊಂಡ ಪೋಟೋ ಗಳನ್ನು ನಿರ್ದೇಶಕ ಜಯತೀರ್ಥ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಐವರ ನಿರ್ದೇಶನಕರ ನಿರ್ದೇಶನದ ಈ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಜಯತೀರ್ಥ ನಿರ್ದೇಶನದ ‘ಬನಾರಸ್’ ಚಿತ್ರ ಕೂಡ ಬಿಡುಗಡೆಗೆ ಸಜ್ಜಾಗಿದೆ.










