flixOye
Buzz

KGF 2: ಜನವರಿ 8 ರಂದು‌ ಬರಲಿದೆ ಕೆಜಿಎಫ್-2 ಟೀಸರ್

ಯಶ್ ಅಭಿಮಾನಿಗಳು ಕಾಯುತ್ತಿರುವ ‘ಕೆಜಿಎಫ್-2’ ಟೀಸರ್ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ. ‘ಕೆಜಿಎಫ್ ‌1’ ಚಿತ್ರ ಬಿಡುಗಡೆಯಾಗಿ ಇಡೀ ಚಿತ್ರರಂಗವೇ ಬೆರಗಾಗುವಂತೆ ಮಾಡಿತ್ತು. ಅದೇ ನಿರೀಕ್ಷೆ ಕೆಜಿಎಫ್-2 ನಲ್ಲೂ ಎಲ್ಲರಲ್ಲೂ ಇದೆ.

https://twitter.com/prashanth_neel/status/1340879166258855936?s=21

ಇಂದಿಗೆ ‘ಕೆಜಿಎಫ್’ ಬಿಡುಗಡೆಯಾಗಿ ಎರಡು ವರ್ಷಗಳಾದ ಈ ಸಂದರ್ಭದಲ್ಲಿ ಪ್ರಶಾಂತ್ ನೀಲ್ 2021 ಜನವರಿ 8 ರಂದು ಬೆಳಗ್ಗೆ 10 ಗಂಟೆ 18 ನಿಮಿಷಕ್ಕೆ ಸರಿಯಾಗಿ ಹೊಂಬಾಳೆ ಫಿಲ್ಮ್ಸ್‌ ಯೂಟ್ಯೂಬ್ ಚಾನಲ್ ನಲ್ಲಿ ‘ಕೆಜಿಎಫ್-2’ ಚಿತ್ರದ ಟೀಸರ್ ಬಿಡುಗಡೆ ಆಗುತ್ತಿದೆ ಎಂದು ಟ್ವೀಟ್ ಮಾಡುವ ಮೂಲಕ‌ ಹೇಳಿದ್ದಾರೆ. ಜನವರಿ 8 ರಂದು ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ ಅಂದು ಅವರ ಸಿನಿಮಾದ ಟೀಸರ್ ಬಿಡುಗಡೆಯಾಗುತ್ತಿದೆ.

ಸಂಬಂಧಿತ · Related