flixOye
Buzz

RH 100 ಸಿನಿಮಾ ಮೂಲಕ ಚಂದನವನಕ್ಕೆ ಖಡಕ್ ಖಳನಟ

ಕಳೆದ ಹಲವು ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಕನ್ನಡದ ಅಪ್ಪಟ ಪ್ರತಿಭೆ ಪ್ರದೀಪ್ ಕುಮಾರ್ ಬೆಳ್ಳಿತೆರೆಗೆ RH100 ಸಿನಿಮಾ ಮೂಲಕ ಖಳ ನಾಯಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಕಿರುಚಿತ್ರಗಳಲ್ಲಿ ನಟಿಸಿ, ಪತ್ತೆದಾರಿ ಪ್ರತಿಭಾ ಮತ್ತು ಇಂತಿ ನಿಮ್ಮ ಆಶಾ ಹೀಗೆ ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿ ಬೆಳ್ಳಿತೆರೆಗೆ ಲಗ್ಗೆ ಇಟ್ಟಿದ್ದಾರೆ. ವಿಲನ್ ಪಾತ್ರಗಳಲ್ಲಿ ಮಾಡಬೇಕೆಂಬ ಬಹುದಿನದ ಕನಸನ್ನು ಈ ಸಿನಿಮಾ ಮೂಲಕ ನನಸು ಮಾಡಿಕೊಂಡಿದ್ದಾರೆ.

RH100 ಸಿನಿಮಾ ಅಲ್ಲದೇ DAD ಎಂಬ ಸಿನಿಮಾ ದಲ್ಲೂ ಅಭಿನಯಿಸಿದ್ದು, ಅದು ಸಹ ತೆರೆಗೆ ಬರಲು ಸಜ್ಜಾಗಿದೆ.
ಅರಿoದಮ್ ಸಿನೆಮಾದಲ್ಲೂ ಸಹ ಖಳನಾಯಕನಾಗಿ ಮಿಂಚಿದ್ದು, ಕನ್ನಡಕ್ಕೆ ಪ್ರತಿಭಾನ್ವಿತ ನಟ ಸಿಕ್ಕಂತಾಗಿದೆ. ರಂಗಭೂಮಿಯಲ್ಲಿ ಪಳಗಿದ ನಟ ಎಲ್ಲಿ ಬೇಕಾದರೂ ನಟಿಸಬಲ್ಲರು.. ಕಟ್ಟುಮಸ್ತಾದ ದೇಹ ಹೊಂದಿರೋ ಪ್ರದೀಪ್ ವಿಲನ್ ಪಾತ್ರಕ್ಕೆ ಹೇಳಿ ಮಾಡಿಸಿದ ಕಲಾವಿದ ಅನ್ಸುತ್ತೆ.

ಪ್ರದೀಪ್ ಅವರ ರಂಗಭೂಮಿ ಯಿಂದ ಸಿನಿಮಾ ವರೆಗಿನ ಜರ್ನಿಯಲ್ಲಿ ಸಾಕಷ್ಟು ಏಳು ಬೀಳು ಕಂಡು ಇತ್ತೀಚಿಗೆ ತನ್ನ ಪ್ರತಿಭೆಯ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಅವರ ಸಿನಿಮಾ ಜರ್ನಿ ಗೆ ಶುಭವಾಗಲಿ. ಚಂದನವನದಲ್ಲಿ ಮಗದಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದು ನಮ್ ಆಶಯ.

ಸಂಬಂಧಿತ · Related