flixOye
Buzz

ಕೊನೆಗೂ‌ ಕ್ಷಮೆ ಕೇಳಿದ‌ ತೆಲುಗು‌ ನಟ ರಂಗರಾಜು

ಸಾಹಸ ಸಿಂಹ ವಿಷ್ಣುವರ್ಧನ್ ‌ಬಗ್ಗೆ ಅವಹೇಳನಕಾರಿ ಹೇಳಿಕೆ‌ ನೀಡಿದ ತೆಲುಗು ನಟ ವಿಜಯ ರಂಗರಾಜು ವಿಷ್ಣುವರ್ಧನ್ ರವರ ಅಭಿಮಾನಿಗಳು ಹಾಗೂ‌ ಸ್ಯಾಂಡಲ್ ವುಡ್ ನ ಅಕ್ರೋಶಕ್ಕೆ ಕಾರಣವಾಗಿದ್ದರು. ಈಗ ತೆಲುಗು‌ ನಟ ವಿಜಯ‌ ರಂಗರಾಜು‌ ಕೊನೆಗೂ ಕ್ಷಮೆಯಾಚಿಸಿದ್ದು, ‘ವಿಷ್ಣುದಾದ ಬಗ್ಗೆ ನಾನು ಮಾತನಾಡಿರುವುದು ತಪ್ಪು, ತಲೆ‌ ಕೆಟ್ಟು ಈ‌ ರೀತಿ‌ ಈ‌ ಮಾತನಾಡಿದ್ದೇನೆ.

ನನ್ನ ಹೇಳಿಕೆಯಿಂದ ವಿಷ್ಣು ಅಭಿಮಾನಿಗಳಿಗೆ ಮತ್ತೆ ಕುಟುಂಬಸ್ಥರಿಗೆ ಯಾರಿಗೆ‌ ನೋವಾಗಿದರೂ ಎಲ್ಲರ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತೇನೆ’ ಎಂದು‌ ವಿಡಿಯೋ ಮೂಲಕ‌ ಅಂಗಲಾಚಿ ಕ್ಷಮೆ ಕೇಳಿದ್ದಾರೆ. ಟಾಲಿವುಡ್ ನಲ್ಲಿ ಖಳನಟನಾಗಿ ಗುರುತಿಸಿಕೊಂಡಿರುವ ರಂಗರಾಜು ಕೆಲವು ದಿನಗಳ‌ ಹಿಂದೆ ತೆಲುಗಿನ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ನಾನು ವಿಷ್ಣುವರ್ಧನ್ ‌ರವರ ಕೆನ್ನೆಗೆ ಬಾರಿಸಿದ್ದೆ ಎಂದು ವಿಷ್ಣುವರ್ಧನ್ ರವರ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ರಂಗರಾಜು ಈ‌ಗ ಕ್ಷಮೆಯಾಚಿಸಿದ್ದಾರೆ.

ಸಂಬಂಧಿತ · Related