flixOye
Buzz

ಬಳೆಪೇಟೆಯಲ್ಲಿ‌ ನಿಂತ ಗ್ಲಾಮರ್ ಬ್ಯೂಟಿ‌ ಅನಿತಾ ಭಟ್- ಪ್ರಮೋದ್ ಬೋಪಣ್ಣ

ಮೆಜೆಸ್ಟಿಕ್, ಕಲಾಸಿಪಾಳ್ಯ ಸಿನಿಮಾಗಳವ ನಂತರ ಬೆಂಗಳೂರಿನ ಏರಿಯಾ ಹೆಸರಿನೊಂದಿಗೆ ಸಿನಿಮಾ ಬರುತ್ತಿದೆ. ಹೌದು, ಬಳೆಪೇಟೆ ಹೆಸರಿನೊಂದಿಗೆ ರೆಡಿಯಾಗ್ತಿರೋ ಬಹುನಿರೀಕ್ಷಿತ ಸಿನಿಮಾ. ಗ್ಲಾಮರ್ ಬ್ಯೂಟಿ‌ ಅನಿತಾ ಭಟ್, ನಟ‌ ಪ್ರಮೋದ್ ಬೋಪಣ್ಣ ನಟಿಸ್ತಿರೋ ‌ಬಹುನಿರೀಕ್ಷಿತ ಚಿತ್ರ. ಡಿಫರೆಂಟ್ ಟೈಟಲ್ ಮೂಲಕ ಕ್ಯೂರಿಯಾಸಿಟಿ ಹುಟ್ತಿರೋ ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸಖತ್ ಸೌಂಡ್ ಮಾಡ್ತಿದೆ.

ಕೈಯಲ್ಲಿ ಗನ್ ಹಿಡಿದು ಹೆಣ್ಣೊಬ್ಬಳನ್ನ ಸುತ್ತುವರೆದಿರುವ ಗಂಡೈಕ್ಳ ಗ್ಯಾಂಗ್.‌ ಆಕೆಯ ನೋವು, ಕಷ್ಟ, ಅಸಹಾಯಕತೆ ಎಲ್ಲವೂ ಪೋಸ್ಟರ್‌ನಲ್ಲಿ‌ ಮೂಡಿ ಬಂದಿದೆ.

ಇನ್ನೂ‌ ಈ ಚಿತ್ರಕ್ಕೆ ರಿಷಿಕೇಶ್ ನಿರ್ದೇಶನ‌‌ ಮಾಡೋ‌ ಮೂಲಕ ಡೈಕೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.‌ ಇಷ್ಟೇ ಅಲ್ಲದೇ ಕಥೆ, ಚಿತ್ರಕಥೆ, ಕ್ಯಾಮರಾ ಹಿಡಿದಿರೋ ರಿಷಿ‌ ಸಂಕಲನ‌ ಕೂಡ ಮಾಡ್ತಿದ್ದಾರೆ.

ನಿರ್ಮಾಪಕ‌ ಉಮೇಶ್ ಬಣಕಾರ್,‌ ಮಯೂರ್ ಪಟೇಲ್ ಸೇರಿ ಸೇರಿದಂತೆ ಇತರರು ನಟಿಸಿದ್ದಾರೆ. ಅಂದಹಾಗೇ ಚಿತ್ರಕ್ಕೆ ಶಿವರಾಮ್ ಬಂಡವಾಳ ಹಾಕಿದ್ದು, ಇದು ಅವರ‌ ಮೊದಲ‌ ಚಿತ್ರವಾಗಿದೆ.

ಇನ್ನೂ ಅನಿತಾ ಭಟ್ ಡಿ ಗ್ಲಾಮರ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟ ಪ್ರಮೋದ್ ಬೋಪಣ್ಣ ಕೈಯಲ್ಲಿ ಮರೆಯದು‌ ಕ್ಷಮಿಸು, ಅಂದುಕೊಂಡಂತೆ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿದ್ದು, ಸದ್ಯ ಬಳೆಪೇಟೆ ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ.

ಸಂಬಂಧಿತ · Related