flixOye
Buzz

ಕಾಲಭೈರವನ ಸನ್ನಿಧಿಯಲ್ಲಿ “ಐರಾವನ್” ಗೆ ಮುಹೂರ್ತ…

ಜಯರಾಂ ಕಾರ್ತಿಕ್ (ಜೆಕೆ) ಹಾಗೂ‌ ಅದ್ವಿತಿ‌ ಶೆಟ್ಟಿ ನಟನೆ ಹೊಸ ಚಿತ್ರ ‘ಐರಾವನ್’ ಗೆ ಗವಿಪುರಂ ಕಾಲ ಭೈರವನ ‌ಸನ್ನಿಧಿಯಲ್ಲಿ ಮುಹೂರ್ತ ಸಮಾರಂಭ ‌ನೆರವೇರಿಸಲಾಯಿತು.


ದೇವರ ಮೇಲೆ ಸೆರೆಹಿಡಿಯಲಾದ ಮೊದಲ ದೃಶ್ಯಕ್ಕೆ ನಿರಂತರ ಗಣೇಶ್ ಆರಂಭ ಫಲಕ ತೋರಿದ್ದು, ತುಮಕೂರಿನ ಶ್ರೀ ಶ್ರೀ ಸಾಗರ ಮಹಾಸ್ವಾಮಿಗಳು ಕ್ಯಾಮೆರಾ‌ ಚಾಲನೆ ಮಾಡಿದರು. ಸಹಾಯಕ ‌ನಿರ್ದೇಶಕರಾಗಿ ಚಿತ್ರರಂಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಮ್ಸ್ ರಂಗಾ ತಮ್ಮ ಚೊಚ್ಚಲ‌ ಚಿತ್ರ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.

ನಿರಂತರ‌ ಗಣೇಶ್ ಅವರು ತಮ್ಮ‌ ನಿರಂತರ ಪ್ರೊಡಕ್ಷನ್ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ‘ಐರಾವನ್’ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯಾಗಿದ್ದು ಈ ಚಿತ್ರದಲ್ಲಿ ಜಯರಾಂ ಕಾರ್ತಿಕ್ (ಜೆಕೆ)ಗೆ ಜೊತೆಯಾಗಿ ಅದ್ವಿತಿ‌ಶೆಟ್ಟಿ‌ ಕಾಣಿಸಿಕೊಳ್ಳಲಿದ್ದಾರೆ. ವಿವೇಕ್ ಅವಿನಾಶ್, ಕೃಷ್ಣ ಹೆಬ್ಬಾರ್ ಮುಂತಾದವರ ತಾರಾಬಳಗ ಚಿತ್ರದಲ್ಲಿದೆ. ರಾಮ್ಸ್ ರಂಗಾ‌ ನಿರ್ದೇಶನದ ಜೊತೆಗೆ ಕಥೆ-ಚಿತ್ರಕಥೆ ಬರೆದಿದ್ದಾರೆ.

ಎಸ್.ಪ್ರದೀಪ್ ವರ್ಮ ಸಂಗೀತ ನಿರ್ದೇಶನವಿರುವ ಈ‌ ಚಿತ್ರಕ್ಕೆ ದೇವೇಂದ್ರ ಛಾಯಾಗ್ರಹಣ ಮಾಡಿದ್ದಾರೆ. ಕೆ.ಎಂ.ಪ್ರಕಾಶ್‌ ಸಂಕಲನ, ಅರ್ಜುನ್‌ ಸಾಹಸ ನಿರ್ದೇಶನ ಮಾಡಿದ್ದು, ವಲ್ಲಭ ಅವರ ನಿರ್ಮಾಣ ನಿರ್ವಹಣೆಯಿದೆ. ‘ಐರಾವನ್’ ಚಿತ್ರದ‌ ಚಿತ್ರೀಕರಣ ಬೆಂಗಳೂರು ಹಾಗೂ‌ ಮಂಗಳೂರಿನಲ್ಲಿ‌ ಒಂದು ಹಂತದ ಚಿತ್ರೀಕರಣ ನಡೆಯಲಿದೆಯಂತೆ.

ಸಂಬಂಧಿತ · Related