flixOye
Buzz

ಮತ್ತೆ ಬಣ್ಣ ಹಚ್ಚಲಿದ್ದಾರೆ ನಿಖಿತ ತುಕ್ರಾಲ್‌…!!

ಬಹು ಭಾಷಾ ನಟಿ ಸ್ಯಾಂಡಲ್ ವುಡ್ ನಲ್ಲಿ ಮಿಂಚಿದ ಚೆಲುವೆ ನಿಖಿತ ತುಕ್ರಾಲ್ ಮತ್ತೆ‌ ಸುದ್ದಿಯಲ್ಲಿದ್ದಾರೆ. ಮದುವೆಯ ‌ನಂತರ ಸಿನಿಮಾ ನಟನೆಯಿಂದ ದೂರವಿದ್ದ ನಿಖಿತ‌ ತಮ್ಮ‌ ಮಗು‌ ಸಂಸಾರ ಅಂತ ಅದರಲ್ಲೇ ಬ್ಯುಸಿಯಾಗಿದ್ದರು. ಈಗ ಮತ್ತೆ ಚಿತ್ರರಂಗಕ್ಕೆ ಎಂಟ್ರಿ‌ ಕೊಡುವ ಸುದ್ದಿ‌ ಕೇಳಿ‌ ಬರುತ್ತಿದೆ. ಹೌದು ಈ ಬಗ್ಗೆ ಸಣ್ಣ‌ ಸುಳಿವನ್ನು ಬಿಟ್ಟು ಕೊಟ್ಟಿದ್ದಾರೆ ನಿಖಿತ ತುಕ್ರಾಲ್.

ದಕ್ಷಿಣ ಭಾರತದಲ್ಲಿ‌ ಸ್ಟಾರ್‌ ನಟರ ಜೊತೆ‌ ನಟಿಸಿ ಖ್ಯಾತ ನಟಿಯಾಗಿ‌ ತೆರೆ ಮೇಲೆ ಕಾಣಿಸಿಕೊಂಡಿದ್ದ‌ ನಿಖಿತ ಕನ್ನಡದಲ್ಲೂ‌ ಸ್ಟಾರ್‌ ನಟರ ಜೊತೆ‌ ಅಭಿನಯಿಸಿದ್ದರು. ಕನ್ನಡದ ಬಿಗ್ಬಾಸ್‌ನಲ್ಲೂ ಕಾಣಿಸಿಕೊಂಡಿದ್ದರು. 10ವರ್ಷಗಳ‌ ಕಾಲ ವಿವಿಧ ಭಾಷೆಗಳಲ್ಲಿ‌ ನಟಿಸಿದ ನಿಖಿತ‌ ಮತ್ತೆ ಬಣ್ಣ‌ ಹಚ್ಚಲು ತಯಾರಾಗಿದ್ದು, ತೆಲುಗು ವೆಬ್ ಸಿರೀಸ್ ‌ಮೂಲಕ‌ ಮತ್ತೆ‌ ಅಭಿಮಾನಿಗಳ‌ ಮುಂದೆ ಬರುತ್ತಿದ್ದಾರೆ. ಇದರ‌ ಬಗ್ಗೆ ನಿಖಿತ ತುಕ್ರಾಲ್‌ ಸಾಮಾಜಿಕ ‌ಜಾಲತಾಣದಲ್ಲಿ ಹಂಚಿಕೊಂಡಿದ್ದು ಹೆಚ್ಚಿನ‌ ಮಾಹಿತಿ ಮಾತ್ರ ಬಿಟ್ಟುಕೊಟ್ಟಿಲ್ಲ.

ಸಂಬಂಧಿತ · Related