flixOye
Buzz

ನಿರ್ದೇಶಕ ಎಸ್.ನಾರಾಯಣ್ ಗೆ 1.6 ಕೋಟಿ ವಂಚನೆ

ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಅವರಿಗೆ ಸಿನಿಮಾ ನಿರ್ಮಾಣದ‌ ವಿಷಯದಲ್ಲಿ 1.6 ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ನಾರಾಯಣ್ ರವರು ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಭೇಟಿಕೊಟ್ಟು, ಇನ್ಸ್‌ಪೆಕ್ಟರ್ ಪುನೀತ್ ರವರಿಗೆ ಸಂಬಂಧ ಪಟ್ಟ ದಾಖಲೆ‌ಗಳನ್ನು ನೀಡಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿನಿಮಾ ನಿರ್ಮಾಣ ಮಾಡುವುದಾಗಿ ಐದು ಮಂದಿ ಬಂದಿದ್ದು ಅವರ ಮಾತು ನಂಬಿ ಸಿನಿಮಾ ಶುರು ಮಾಡಿದ್ದೆ. ಚಿತ್ರೀಕರಣದ ಹಂತದಲ್ಲಿ ಹಣ ಕೊಡದೇ ನೆಪ ಹೇಳುತ್ತಿದ್ದ ಅವರು ನಿವೇಶನವೊಂದನ್ನು ಮಾರಾಟ ಮಾಡುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದಾರೆ ಎಂದು ಹೇಳಿದ್ದಾರೆ.

ಸಂಬಂಧಿತ · Related