flixOye
Buzz

ಚಿಕ್ಕಣ್ಣ ಈಗ ‘ಉಪಾಧ್ಯಕ್ಷ’…!!

ಹಾಸ್ಯ‌ ನಟನಾಗಿ‌ ಚಿತ್ರರಂಗಕ್ಕೆ ಎಂಟ್ರಿ‌ ಕೊಟ್ಟ ಚಿಕ್ಕಣ್ಣ ಈಗ ‘ಉಪಾಧ್ಯಕ್ಷ’ ನಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ‌ಚಿತ್ರರಂಗದಲ್ಲಿ 71 ಕ್ಕೂ‌ ಹೆಚ್ಚು‌ ಸಿನಿಮಾಗಳಲ್ಲಿ ಹಾಸ್ಯ‌ ನಟನಾಗಿ‌ ಗುರುತಿಸಿಕೊಂಡಿದ್ದ‌ ಚಿಕ್ಕಣ್ಣ ‌ಹೀರೋ ಗೆಟಪ್‌ ನಲ್ಲಿ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ.

ಚಿಕ್ಕಣ್ಣ ಮತ್ತು ಶರಣ್ ಕಾಂಬೀಶನ್ ನಲ್ಲಿ ಮೂಡಿ ಬಂದ ‘ಅಧ್ಯಕ್ಷ’ ಸಿನಿಮಾದಲ್ಲಿ ಉಪಾಧ್ಯಕ್ಷನಾಗಿ ಮಿಂಚಿದ್ದ ಚಿಕ್ಕಣ್ಣಗೆ ಅವರ ಸಿನಿ ಜರ್ನಿಯಲ್ಲಿ ಇದೊಂದು ದೊಡ್ಡ ಬ್ರೇಕ್ ತಂದುಕೊಟ್ಟಿತ್ತು. ಈಗ ‘ಉಪಾಧ್ಯಕ್ಷ’ ಸಿನಿಮಾದಲ್ಲಿ ಹೀರೋ ಆಗಿ ಎಂಟ್ರಿ ಕೊಡುತ್ತಿರುವ ಚಿತ್ರವನ್ನು ಚಂದ್ರಮೋಹನ್ ನಿರ್ದೇಶನ ಮಾಡುತ್ತಿದ್ದು, ಇದು ಉಮಾಪತಿ ಫಿಲಂಸ್ ಬ್ಯಾನರ್ ನಡಿ ನಿರ್ಮಾಣಗೊಳ್ಳುತ್ತಿದ್ದು, ‘ಹೆಬ್ಬುಲಿ’, ‘ರಾಬರ್ಟ್’, ‘ಒಂದಲ್ಲಾ ಎರಡಲ್ಲಾ’ ಸಿನಿಮಾವನ್ನು ನಿರ್ಮಿಸಿರುವ ಉಮಾಪತಿ ಎಸ್.ಗೌಡ ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

‘ಉಪಾಧ್ಯಕ್ಷ’ ಇದೊಂದು ಕಾಮಿಡಿ ಎಂಟರ್ ಟೈನರ್ ಸಿನಿಮಾವಾಗಿದ್ದು, ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು, ಸುಧಾಕರ್ ಎಸ್.ರಾಜ್ ರವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ‘ಉಪಾಧ್ಯಕ್ಷ’ ನಾಗಿ ಬರುತ್ತಿರುವ ಚಿಕ್ಕಣ್ಣನನ್ನು ಸಿನಿರಸಿಕರು ಸ್ವಾಗತಿಸಲು ಕಾಯುತ್ತಿದ್ದಾರೆ.

ಸಂಬಂಧಿತ · Related