flixOye
Buzz

ಚಿತ್ರಮಂದಿರಕ್ಕೆ ಬರುತ್ತಿದೆ ‘ಪುರುಸೋತ್ ರಾಮ’…

ಚಿತ್ರಮಂದಿರ ತೆರೆಯಲು ಕೇಂದ್ರ ಸರ್ಕಾರ ಅನುಮತಿ ಕೊಟ್ಟರೂ, ಪ್ರೇಕ್ಷಕರು ಮಾತ್ರ ಚಿತ್ರಮಂದಿರದ ಕಡೆ ಬರಲು ಮನಸ್ಸು‌ ಮಾಡಿಲ್ಲ. ಈಗಾಗಲೇ ಚಿತ್ರಮಂದಿರದಲ್ಲಿ ಟಿಕೇಟ್ ದರಗಳನ್ನು ಕಡಿಮೆ ಮಾಡಿದ್ದಾರೆ. ಅದರೆ ಯಾವುದೇ ಹೊಸ ಸಿನಿಮಾದ ಬಿಡುಗಡೆ ದಿನಾಂಕ‌ವನ್ನು ಇದುವರೆಗೂ ಘೋಷಣೆ ಮಾಡಿಲ್ಲ.

ಮುಂದಿನ ವಾರವೂ ಕೆಲವು ಚಿತ್ರಗಳು ರಿ-ರಿಲೀಸ್ ಆಗುತ್ತಿದೆ. ಹೊಸ ಸಿನಿಮಾಗಳು ಸದ್ಯಕ್ಕೆ ಚಿತ್ರಮಂದಿರಕ್ಕೆ ಬರುವುದು ಅನುಮಾನ. ಅದರೆ ಇಲ್ಲೊಂದು‌ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಅಕ್ಟೋಬರ್ 23ಕ್ಕೆ ‘ಪುರುಸೋತ್ ರಾಮ’ ಸಿನಿಮಾ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದ್ದು, ಲಾಕ್‌ಡೌನ್ ಆದ್ಮೇಲೆ ಕೇಂದ್ರ ಸರ್ಕಾರದಿಂದ ಚಿತ್ರಮಂದಿರ ತೆರೆಯಲು ಅನುಮತಿ ಕೊಟ್ಟ ಮೇಲೆ ನೇರವಾಗಿ ಚಿತ್ರಮಂದಿರಕ್ಕೆ ಬರುತ್ತಿರುವ ಮೊದಲ ಸಿನಿಮಾ.

ರವಿಶಂಕರ್ ಗೌಡ, ಕುರಿಪ್ರತಾಪ್ ಹಾಗೂ ಕಾಮಿಡಿ ಕಿಲಾಡಿ ಶಿವರಾಜ್ ಕೆ.ಆರ್ ಪೇಟೆ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವನ್ನು ರಿತಿಕ್ ಸರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ನಿರ್ಮಾಪಕಿ ಮಾನಸ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಸಂಬಂಧಿತ · Related