flixOye
Buzz

ನಟಿ‌ ಪ್ರಣೀತಾ ಹೆಸರಲ್ಲಿ‌ 13.5 ಲಕ್ಷ ವಂಚನೆ…!!

ಬಹುಭಾಷಾ ನಟಿ‌ ಪ್ರಣೀತಾ‌ರವರ ಹೆಸರಲ್ಲಿ ಬರೋಬ್ಬರಿ‌ 13.5 ಲಕ್ಷ‌ ರೂಪಾಯಿ ಪಡೆದು‌ ಪರಾರಿಯಾಗಿರುವ ಇಬ್ಬರ ವಿರುದ್ಧ ‌ಪೊಲೀಸರು‌ ಕೇಸ್ ದಾಖಲಿಸಿಕೊಂಡಿದ್ದಾರೆ.

ಮಹಮ್ಮದ್ ಜೂನಾಯತ್ ಹಾಗೂ ವರ್ಷಾ ಎಂಬುವವರು ನಟಿ ಪ್ರಣೀತಾರವರನ್ನು ಬ್ರಾಂಡ್ ಅಂಬಾಸಿಡರ್ ‌ಮಾಡುವುದಾಗಿ ನಂಬಿಸಿ‌ ನಟಿ ಪ್ರಣೀತಾ ಹೆಸರಿನಲ್ಲಿ ಎಸ್.ವಿ‌ ಗ್ರೂಪ್ ಬಿಲ್ಡರ್ಸ್ ಆಂಡ್ ಡೆವಲಪರ್ಸ್ ಕಂಪೆನಿಯಿಂದ ಹಣ ಪಡೆದು ಪರಾರಿಯಾಗಿದ್ದರು.

ಮಹಮ್ಮದ್ ‌ಮತ್ತು ವರ್ಷಾ ಎಂಬುವವರು ವಿರುದ್ಧ ‌ಹೈ‌ ಗ್ರೌಂಡ್ಸ್ ಪೋಲಿಸ್ ‌ಠಾಣೆಯಲ್ಲಿ ದೂರು‌ ನೀಡಲಾಗಿದ್ದು, ದೂರಿನ‌ ಆಧಾರದ ಮೇಲೆ‌ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ ಪೋಲೀಸರು. ಬೆಂಗಳೂರಿನ‌ ಖಾಸಗಿ ಹೋಟೆಲ್ ಗೆ ಎಸ್.ವಿ.ಗ್ರೂಪ್ ಮ್ಯಾನೇಜರ್ ಅವರನ್ನು ಕರೆಸಿಕೊಂಡಿದ್ದ ಆರೋಪಿಗಳು, ನಾವು ಪ್ರಣೀತಾ ರವರ ಮ್ಯಾನೇಜರ್ ‌ಎಂದು ಅಲ್ಲದೇ ಅವರನ್ನು‌ ನಿಮ್ಮ‌ ಸಂಸ್ಥೆಯ ‌ಬ್ರಾಂಡ್ ಗೆ ಅಂಬಾಸಿಡರ್ ‌ಮಾಡೋದಾಗಿ ಹೇಳಿ‌ ಡೀಲ್ ಮಾಡಿಕೊಂಡಿದ್ದಾರೆ. ನೀವು ಹಣ ನೀಡಿದರೆ ಅವರಿಂದ ಒಪ್ಪಂದಕ್ಕೆ ಸಹಿ ಹಾಕಿಸುವುದಾಗಿ 13.5 ಲಕ್ಷ ಹಣ ಪಡೆದು‌ ಅಲ್ಲಿಂದ ಪರಾರಿಯಾಗಿದ್ದಾರೆ.

ಸಂಬಂಧಿತ · Related