ಲಾಕ್ಡೌನ್ ಪರಿಣಾಮಕ್ಕೆ ಚಲನಚಿತ್ರೋದ್ಯಮವು ಹೊರತಾಗಿರಲಿಲ್ಲ. ಹಲವಾರು ಚಿತ್ರದ ಚಿತ್ರೀಕರಣ ಸ್ಥಗಿತಗೊಳ್ಳಬೇಕಾಯಿತು. ಈಗ ಚಿತ್ರೀಕರಣವನ್ನು ಪುನರಾರಂಭಿಸುವುದರೊಂದಿಗೆ ಸಹಜ ಸ್ಥಿತಿಗೆ ಮರಳುತ್ತಿದೆ ಚಿತ್ರರಂಗ.
ಆ ಲಿಸ್ಟ್ ನಲ್ಲಿರುವ ಪ್ರಿಯಾಂಕಾ ಉಪೇಂದ್ರ ಅಭಿನಯದ ‘ಉಗ್ರಾವತಾರ’ ಸಿನಿಮಾ ಕೂಡ ಒಂದು. ಈ ಚಿತ್ರದ ಚಿತ್ರೀಕರಣದಲ್ಲಿ ಮತ್ತೆ ಭಾಗವಹಿಸಲು ಉತ್ಸುಕರಾಗಿದ್ದಾರೆ ಪ್ರಿಯಾಂಕಾ ಉಪೇಂದ್ರ. ‘ಉಗ್ರಾವತಾರ’ ಚಿತ್ರತಂಡ ಚಿತ್ರೀಕರಣ ಪ್ರಾರಂಭಿಸಿದ್ದು, ಇದರಲ್ಲಿ ಪೊಲೀಸ್ ಅಧಿಕಾರಿಯಾಗಿ ಪ್ರಿಯಾಂಕರವರು ನಟಿಸುತ್ತಿದ್ದು, ಆಕ್ಷನ್ ಮೂಡ್ಗೆ ಬಂದಿದ್ದಾರೆ.
“ನಾವು ಕೆಲವೊಂದು ಸ್ಥಳಗಳಲ್ಲಿ ಚಿತ್ರೀಕರಣ ಮಾಡುತ್ತಿರುವುದರಿಂದ ಸುರಕ್ಷತೆಯಿಂದ ಚಿತ್ರೀಕರಣ ದಲ್ಲಿ ಪಾಲ್ಗೊಂಡಿದ್ದೇವೆ. ಈ “ಚಿತ್ರದಲ್ಲಿ 50% ಭಾಗಗಳನ್ನು ಚಿತ್ರೀಕರಣ ಮುಗಿಸಿದ್ದಾರೆ. ಡೈಲಾಗ್ ಗಳು ಚೆನ್ನಾಗಿದೆ. ಹೊಸ ನಟರೊಂದಿಗೆ ಕೆಲಸ ಮಾಡುತ್ತಿರುವುದು ಖುಷಿಯಿದೆ. ಅವರೊಂದಿಗೆ ಕೆಲಸ ಮಾಡುವುದು ಮತ್ತು ಅವರ ಕಥೆಗಳನ್ನು ಕೇಳುವುದು ಹೊಸ ಅನುಭವ ಕೊಟ್ಟಿದ್ದೆ.
https://www.instagram.com/p/B8jO44QH_S_/?igshid=1qvxax1az4hbi
ಉದಾಹರಣೆಗೆ, ಟಗರು ಖ್ಯಾತಿಯ ಸುಧಿ ಅಥವಾ ಜಿರಳೆ ಒಬ್ಬ ಪ್ರತಿಭಾವಂತ ನಟ ಮತ್ತು ಅವರು ಉಪೇಂದ್ರರಿಂದ ಹೇಗೆ ಪ್ರೇರಿತರಾಗಿದ್ದಾರೆಂದು ಸುಧಿ(ಜಿರಳೆ) ಹೇಳುತ್ತಿದ್ದರು. ಹೀಗೇ ನಾವೆಲ್ಲರೂ ಶೂಟಿಂಗ್ ಸೆಟ್ ಗೆ ಖುಷಿಯಂದಲೇ ಪಾಲ್ಗೊಂಡಿದ್ದೇವೆ” ಎನ್ನುತ್ತಾರೆ ಪ್ರಿಯಾಂಕ ಉಪೇಂದ್ರರವರು.









