flixOye
Buzz

ಶಿಲ್ಪಾ ಶೆಟ್ಟಿ ಹಾಗೂ‌ ಅವರ ಪತಿ ರಾಜ್ ಕುಂದ್ರಾ ಗೆ ನ್ಯಾಯಾಲಯ ಸಮನ್ಸ್ …!!

ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ ತಮ್ಮ‌ ಕಂಪೆನಿಯ TDS ಪಾವತಿಸುವಲ್ಲಿ‌ ವಿಳಂಬ ಮಾಡಿದಕ್ಕೆ ಇದೀಗ ಸಂಕಷ್ಟಕ್ಕೆ ‌ಸಿಲುಕಿದ್ದಾರೆ ದಂಪತಿಗಳು.

ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್ ಮಾಲೀಕರಾದ ಈ‌ ದಂಪತಿ ಎರಡು‌ ಪ್ರಕರಣಗಳಲ್ಲಿ ಟಿಡಿಎಸ್ ಪಾವತಿಸುವಲ್ಲಿ ವಿಳಂಬ‌ ಮಾಡಿದ್ದು ಇದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ‌ ಬಲ್ಲಾರ್ಡ್ ಪಿಯರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

ಶಿಲ್ಪಾ ಶೆಟ್ಟಿ ‌ಹಾಗೂ‌ ರಾಜ್ ಕುಂದ್ರಾ ದಂಪತಿಗೆ ಅಕ್ಟೋಬರ್‌20 ರಂದು‌ ವಿಚಾರಣೆಗೆ ಹಾಜಾರಾಗುವಂತೆ‌ ನ್ಯಾಯಾಲಯ ಹೇಳಿದೆ. ಇದರಿಂದ‌ ಈ‌ ದಂಪತಿ‌ಗಳು‌ ಒಂದೇ ಬೇಲ್ ತೆಗೆದುಕೊಳ್ಳಬೇಕು ಇಲ್ಲ ನ್ಯಾಯಾಲಯದ ಮುಂದೆ ಹಾಜರಾಗಬೇಕಾಗುತ್ತದೆ.

ಈ‌ ಪ್ರಕರಣಕ್ಕೆ‌‌ ಸಂಬಂಧಿಸಿದಂತೆ ನ್ಯಾಯಾಲಯದ‌ ಮುಂದೆ ವಾದ ಮಂಡಿಸಿದ್ದ ಸ್ಪೆಷಲ್ ‌ಪ್ರಾಸಿಕ್ಯೂಟರ್ ಅಮಿತ್ ಮುಂಡೆ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರ ದಂಪತಿ 2015-16 ಹಾಗೂ‌ 2016-17ನೇ‌ ಸಾಲಿನ ಟಿಡಿಎಸ್ ಕಟ್ಟುವಲ್ಲಿ‌ ವಿಳಂಬ‌ ಮಾಡಿದ್ದರಿಂದ 1 ಕೋಟಿ 46 ಲಕ್ಷಕ್ಕೂ ಅಧಿಕ ಕಡಿತವಾಗಿದೆ ಎಂದು‌ ಮಾಹಿತಿ‌ ನೀಡಿದ್ದಾರೆ.

ಸಂಬಂಧಿತ · Related