ಕನ್ನಡ ಮತ್ತು ತೆಲುಗು ಚಿತ್ರೋದ್ಯಮಗಳಲ್ಲಿ ತಮ್ಮದೇ ಆದ ಸ್ಥಾನ ಪಡೆದಿರುವ ನಟಿ ರಶ್ಮಿಕಾ ಮಂದಣ್ಣ. ರಶ್ಮಿಕಾ ಶೀಘ್ರದಲ್ಲೇ ತಮಿಳು ಚಿತ್ರ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ತಮ್ಮ ಚೊಚ್ಚಲ ತಮಿಳು ಚಿತ್ರದ ಶೂಟಿಂಗ್ ಮುಗಿಸಿರುವ ವಿಷಯವನ್ನು ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ. “ಸುಲ್ತಾನ್” ಎಂಬ ಹೆಸರಿನ ಈ ಚಿತ್ರದಲ್ಲಿ ಕಾರ್ತಿಗೆ ಜೊತೆಯಾಗಿರು ವುದನ್ನು ರಶ್ಮಿಕಾ ಹೇಳಿಕೊಂಡಿದ್ದಾರೆ. ಕಳೆದ ವರ್ಷವೇ ಚಿತ್ರದ ಶೂಟಿಂಗ್ ಪ್ರಾರಂಭಿಸಿದ್ದರು. ಅದರೆ ಕೊರೋನಾದಿಂದ ಸಿನಿಮಾದ ಚಿತ್ರೀಕರಣವೂ ವಿಳಂಬವಾಗಿತ್ತು. ಈಗ ರಶ್ಮಿಕಾ ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ರಶ್ಮಿಕಾರವರು “ಇದು ನನ್ನ ಮೊದಲ ತಮಿಳು ಚಿತ್ರವಾಗಿದ್ದು, ನಾನು ಕೆಲಸ ಮಾಡಿದ ಚಿತ್ರತಂಡವೂ ಚೆನ್ನಾಗಿತ್ತು.
https://www.instagram.com/p/CGEjJhip1gB/?igshid=13t0w3sibni2q
ಎಲ್ಲರೂ ಒಂದೇ ಫ್ಯಾಮಿಲಿಯಂತೆ ಪ್ರೀತಿಯಿಂದ ಇದ್ದೇವು. ‘ಸುಲ್ತಾನ್’ ದಲ್ಲಿ ಉತ್ತಮವಾಗಿ ಅಭಿನಯ ಮಾಡಿದ್ದೇನೆ ಎಂದು ನಾನು ಭಾವಿಸುತ್ತೇನೆ .. ಜೈಸುಲ್ತಾನ್” ಎಂದು ಹೇಳಿಕೊಂಡಿದ್ದಾರೆ. ಇದರ ಮಧ್ಯೆ ಕನ್ನಡದಲ್ಲಿ, ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ಕೊರೋನಾದಿಂದ ಚಿತ್ರದ ಚಿತ್ರೀಕರಣ ಮತ್ತು ಬಿಡುಗಡೆಯನ್ನು ವಿಳಂಬ ಮಾಡಿದ್ದರಿಂದ ಚಿತ್ರವು ಪೂರ್ಣಗೊಳ್ಳುವ ಕೊನೆಯ ಹಂತದಲ್ಲಿದೆ. ಧ್ರುವ ಮತ್ತು ರಶ್ಮಿಕಾರವರ ಈ ಚಿತ್ರದ ‘ಕರಬು…’ ಎಂಬ ಹಾಡು ದೊಡ್ಡ ಹಿಟ್ ಆಗಿದ್ದು, ಈಗಲೂ ಸದ್ದು ಮಾಡುತ್ತಿದೆ.

ಕನ್ನಡದಲ್ಲಿ ಮುಂದಿನ ಚಿತ್ರಕ್ಕೆ ಸಹಿ ಹಾಕದ ರಶ್ಮಿಕಾ ತೆಲುಗಿನಲ್ಲಿ ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳು ಭಾಷೆಯ ಚಿತ್ರಕ್ಕಾಗಿ ಮಾತುಕತೆ ನಡೆಸುತ್ತಿರುವ ಬಗ್ಗೆ ವರದಿಗಳು ಬಂದಿದ್ದವು ಆದರೆ ಇತ್ತೀಚೆಗೆ ಅದರ ಬಗ್ಗೆ ಏನೂ ಮಾತನಾಡದ ರಶ್ಮಿಕಾ, ಹಿಂದಿ ಚಿತ್ರರಂಗದಲ್ಲೂ ಅಭಿನಯಿಸುತ್ತಿದ್ದಾರೆ ಎಂಬ ವರದಿಗಳು ಬಂದಿದ್ದವು ಅದರೆ ಅದೆಲ್ಲಾ ಸುಳ್ಳು ಎಂದು ಹೇಳಿದ್ದಾರೆ. ಅಭಿನಯಿಸುವ ಅವಕಾಶ ಬಂದರೆ ಅಭಿನಯಿಸುತ್ತೇನೆ. ಅದಕೋಸ್ಕರ ಕಾಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅವರು ಶೀಘ್ರದಲ್ಲೇ ಹಿಂದಿ ಚಿತ್ರಕ್ಕೆ ಸಹಿ ಹಾಕುತ್ತಾರೆಯೇ…?









