flixOye
Buzz

ಚಿರು‌ ಪೋಟೋದ ಜೊತೆ ಸೀಮಂತ ಶಾಸ್ತ್ರ ಮಾಡಿಕೊಂಡ ಮೇಘನಾರಾಜ್…

ತುಂಬು ಗರ್ಭಿಣಿಯಾಗಿರುವ ಮೇಘನಾರಾಜ್ ಗೆ ಒಂದು ಕಡೆ ಪ್ರೀತಿಸಿ ಮದುವೆಯಾದ ಗಂಡನನ್ನು ಕಳೆದು ಕೊಂಡ ನೋವಾದರೆ, ಇನ್ನೊಂದು ಕಡೆ ಕರುಳ ಕುಡಿಯ ಆಗಮನದ ಸಂತೋಷ. ತಂದೆ ತಾಯಿಯ ಆರೈಕೆಯಲ್ಲಿರುವ ಮೇಘನಾರಾಜ್ ಗೆ 7 ತಿಂಗಳು ತುಂಬಿದ ಹಿನ್ನೆಲೆಯಲ್ಲಿ ಸೀಮಂತ ಶಾಸ್ತ್ರವನ್ನು ತಂದೆ ಸುಂದರ್ ರಾಜ್ ಹಾಗೂ ತಾಯಿ‌ ಪ್ರಮೀಳಾ ಜೋಷಾಯ್ ಮಾಡಿದ್ದಾರೆ.

ಚಿರು ಅಗಲಿಕೆಯ ನೋವಿನ ನಡುವೆಯೂ ಮಗಳ ಮೊಗದಲ್ಲಿ ಸಂತೋಷವನ್ನು ತರಿಸುತ್ತಿರುವ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ರವರು ಚಿರು ಸರ್ಜಾ ಪೋಟೋವನ್ನು ಪಕ್ಕದಲ್ಲಿ ಇಟ್ಟು ಸೀಮಂತ ಶಾಸ್ತ್ರವನ್ನು ನೆರವೇರಿಸಿದರು. ಇದೀಗ ಮೇಘನಾರಾಜ್ ರವರ ಸೀಮಂತ ಶಾಸ್ತ್ರದ ಪೋಟೋ ಎಲ್ಲಕಡೆ ವೈರಲ್ ಆಗಿವೆ.

ಸಂಬಂಧಿತ · Related