flixOye
Buzz

ಡ್ರಗ್ ನಂಟಿನ‌ ಆರೋಪದಡಿ ಕಣ್ಣೀರಿಟ್ಟ ಅನುಶ್ರೀ…

ಡ್ರಗ್ ನಂಟಿನ‌ ಆರೋಪದಡಿ ಮಂಗಳೂರು ಸಿಸಿಬಿ‌ ಪೋಲಿಸರು ನಿರೂಪಕಿ ಕಂ‌‌ ನಟಿ‌ ಅನುಶ್ರೀಗೆ ನೋಟೀಸ್ ಜಾರಿ‌ ಮಾಡಿ ಸೆಪ್ಟೆಂಬರ್ .24ರಂದು ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದರು. ಅದೇ ರೀತಿ ಅಂದು ಅನುಶ್ರೀ ವಿಚಾರಣೆಗೆ ಹಾಜಾರಾಗಿ ಬಂದಿದ್ದಾರೆ. ಅದರ ಬೆನ್ನಲ್ಲೇ ಸ್ಫೋಟಕ ಮಾಹಿತಿಯೊಂದು ಹೊರ ಬಿದ್ದಿದ್ದು, ನಿರೂಪಕಿ, ನಟಿ ಅನುಶ್ರೀ ಗೆ ರಾಜ್ಯದ ಮೂರು ಪ್ರಭಾವಿ ರಾಜಕಾರಣಿಗಳು ರಕ್ಷಣೆಗೆ ನಿಂತಿದ್ದಾರೆ ಎಂದು ಕೇಳಿ ಬರುತ್ತಿದೆ.

ಅದರಲ್ಲಿ ಕರ್ನಾಟಕದ ಮಾಜಿ‌ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಯ ಮಗ ಹಾಗೂ ಕರಾವಳಿಯ ಪ್ರಭಾವಿ ರಾಜಕಾರಣಿಗಳಿಗೆ ಅನುಶ್ರೀ ಕರೆ ಮಾಡಿ ರಕ್ಷಣೆ ಕೋರಿದ್ದಾರೆ ಎನ್ನಲಾಗಿದೆ. ಸಿಸಿಬಿ ಪೋಲಿಸರ ನೋಟೀಸ್ ಬಂದ ಕೂಡಲೇ ಅನುಶ್ರಿ ಪ್ರಭಾವಿ ರಾಜಕಾರಣಿ ಗಳಿಗೆ ಕರೆ ಮಾಡಿದ್ದಾರೆ.

ಈ ರಾಜಕಾರಣಿಗಳ ಪ್ರಭಾವದಿಂದ ಅನುಶ್ರೀಗೆ ಡೋಪಿಂಗ್ ಟೆಸ್ಟ್ ಮಾಡಿಲ್ಲ ಎನ್ನಲಾಗುತ್ತಿದೆ. ಅದರೆ ಅನುಶ್ರೀ ಸಿಸಿಬಿ‌ ವಿಚಾರಣೆ ಎದುರಿಸಿದ ಬಳಿಕ ಆರಂಭವಾಗಿರುವ ಅಂತೆ ಕಂತೆಗಳಿಂದ ನನ್ನ ಕುಟುಂಬಕ್ಕೆ ಸಾಕಷ್ಟು ನೋವಾಗಿದೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಫೇಸ್ ಬುಕ್ ಲೈವ್ ಬಂದು ಕಣ್ಣೀರು‌ ಹಾಕಿದ್ದಾರೆ .

ಸಂಬಂಧಿತ · Related