flixOye
Buzz

ಅಶ್ವ ಮೂಲಕ ನಿರ್ದೇಶಕನಾದ ಸಂಭಾಷಣೆಕಾರ ಎ.ಆರ್.ಸಾಯಿರಾಂ

ಕನ್ನಡದ ಹಲವು ಚಿತ್ರಗಳಿಗೆ ಸಂಭಾಷಣೆಕಾರನಾಗಿ ಸಹ ನಿರ್ದೇಶಕ
ನಾಗಿ ಕೆಲಸಮಾಡಿರುವ ಎ.ಆರ್.ಸಾಯಿರಾಂ ಅವರು ನಿರ್ದೇಶಕನಾಗಿ
ಬಡ್ತಿ ಪಡೆಯುತ್ತಿದ್ದಾರೆ. ಅಶ್ವ ಎಂಬ ಚಿತ್ರದ ಮೂಲಕ ಸಾಯಿರಾಂ
ಅವರು ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ‌.

ವಿವನ್ ಎಂಬ ಉದಯೋನ್ಮುಖ ನಟ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ
ಪಾದಾರ್ಪಣೆ ಮಾಡಲಿದ್ದು, ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್
ಇಂದು ಬಿಡುಗಡೆಯಾಗಿದೆ‌. ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕ
ಅಜನೀಶ್ ಲೋಕನಾಥ್ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ
ಮಾಡಲಿದ್ದಾರೆ‌. ಕೆ.ಕೆ.ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಕೋಲಾರ್ ಕೇಶವ
ಹಾಗೂ ಹೇಮಾಲತಾ ಎಂಬುವವರು ಈ ಚಿತ್ರವನ್ನು ನಿರ್ಮಾಣ
ಮಾಡಲಿದ್ದಾರೆ‌‌. ಚಿತ್ರದ ಮಹೂರ್ತ ಹಾಗೂ ಇನ್ನಿತರೆ ಕುರಿತ ಮಾಹಿತಿಗಳನ್ನು
ಚಿತ್ರತಂಡ ಸದ್ಯದಲ್ಲೇ ತಿಳಿಸಲಿದ್ದಾರೆ. ಈ ಚಿತ್ರದ ಮೂಲಕ ಚಿತ್ರರಂಗದಲ್ಲಿ
ಹೊಸ ಹೆಜ್ಜೆಯನ್ನು ಪ್ರಾರಂಭಿಸಿರುವ ನಿರ್ದೇಶಕ ಸಾಯಿರಾಂ ಹಾಗೂ ನಟ
ವಿವನ್ ಅವರಿಗೆ ಶುಭಹಾರೈಸೋಣ.

ಸಂಬಂಧಿತ · Related