ಬಹುದಿನಗಳ ನಂತರ ಮಯೂರ್ ಪಟೇಲ್ ಮತ್ತೆ ನಟನೆಗೆ
ಮರಳಿ ನಾಯಕನಾಗಿ ನಟಿಸಿರುವ ರಾಜೀವ ಚಿತ್ರವು ಹೊಸ ವರ್ಷದ
ಮೊದಲವಾರ ತೆರೆಗೆ ಬರಲಿದೆ. ಆರ್ಆರ್ಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿ.ಎಂ.ರಮೇಶ್, ರಾಘವೇಂದ್ರ ರೆಡ್ಡಿ ಹಾಗೂ ಕಿರಣ್ ನಿರ್ಮಿಸುತ್ತಿರುವ
ಈ ಚಿತ್ರವನ್ನು ಪ್ಲೈಯಿಂಗ್ ಕಿಂಗ್ ಮಂಜು ಅವರು ನಿರ್ದೇಶನ ಮಾಡಿದ್ದಾರೆ.
ದೇಶದ ಬೆನ್ನೆಲುಬಾಗಿರುವ ರೈತನ ಕುರಿತ ಕಥೆ ಈ ಚಿತ್ರದಲ್ಲಿ ಇರಲಿದ್ದು,
ಮಯೂರ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅನಿಲ್ ಎಂಬುವವರು ಸಂಗೀತ ನೀಡಿದ್ದು, ಡಾ||ವಿ.ನಾಗೇಂದ್ರ ಪ್ರಸಾದ್ ಚಿತ್ರದ ಎಲ್ಲಾ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.ಪೂರ್ಣಚಂದ್ರ ಬೈಕಾಡಿ ಛಾಯಾಗ್ರಹಣ ಈ ಚಿತ್ರಕ್ಕಿದೆ.










