ಆಸೆಗೆ ಜಗ್ಗದವಳು, ಸಹನೆಗೆ ಪ್ರತಿರೂಪ ಇವಳು, ನೊಂದರೂ ನಗುವನ್ನೇ ಹಂಚುವವಳು ಕ್ಷಮಾ. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಕ್ಷಮಾ ಧಾರಾವಾಹಿ 100 ಸಂಚಿಕೆಗಳನ್ನು ಪೂರೈಸಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಗಂಡನಿಲ್ಲದ ಹೆಣ್ಣೊಬ್ಬಳು ಸಮಾಜದಲ್ಲಿ ಹೇಗೆಲ್ಲಾ ಪರಿಪಾಟಲುಗಳನ್ನು ಅನುಭವಿಸುತ್ತಾಳೆ ತನ್ನ ಮಕ್ಕಳನ್ನು ಬೆಳೆಸಲು ಎಷ್ಟೆಲ್ಲ ತ್ಯಾಗಗಳನ್ನು ಮಾಡುತ್ತಾಳೆ ಎನ್ನು ಕಥಾಹಂದರವನ್ನು ಹೊಂದಿರುವ ಧಾರಾವಾಹಿ ಕ್ಷಮಾ. ಈ ಧಾರಾವಾಹಿ ಉದಯ ಟಿವಿಯಲ್ಲಿ ಗಂಟೆಗೆ ಪ್ರಸಾರವಾಗುತ್ತಿದ್ದು ಈಗ ಸಮಯ ಬದಲಾಗಿದೆ ಅಂದರೆ ಇದೇ ಆಗಸ್ಟ್ 5 ರಿಂದ 8 ಗಂಟೆಯ ಬದಲಾಗಿ 9.30ಕ್ಕೆÉ ಪ್ರಸಾರವಾಗುತ್ತದೆ. ಬಿ.ಸುರೇಶ್ ಬರವಣಿಗೆಯಲ್ಲಿ ಮೂಡಿಬರುತ್ತಿರುವ ಕ್ಷಮಾ ಹೆಣ್ಣುಮಕ್ಕಳ ಫೇವರೇಟ್ ಸೀರಿಯಲ್. 9.30 ಕ್ಕೆ ಎಲ್ಲರೂ ಮನೆಗೆ ಬಂದು ಊಟ ಮಾಡುವ ಸಮಯ ಹಾಗಾಗಿ ಇನ್ನು ಹೆಚ್ಚು ಜನರನ್ನು ಸೆಳಯಲು ನಮಗೆ ಸಿಕ್ಕಿರುವ ಸದವಕಾಶ ಎನ್ನುತ್ತಾರೆ ಕ್ಷಮಾ ಧಾರಾವಾಹಿಯ ಯಜಮಾನಿ ಕಂ ನಿರ್ಮಾಪಕಿ ಶೈಲಜಾ ನಾಗ್. ಆಗಸ್ಟ್ 5 ರಿಂದ ಬದಲಾದ ಸಮಯದಲ್ಲಿ ಬರುತ್ತಿದೆ ಕ್ಷಮಾ ಸೋಮವಾರದಿಂದ ಶುಕ್ರವಾರ ರಾತ್ರಿ 9.30 ಕ್ಕೆ ನಿಮ್ಮ ಉದಯ ಟಿವಿಯಲ್ಲಿ.

“ಕ್ಷಮಾ” ಆಗಷ್ಟ್ 5 ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 9.30ಕ್ಕೆÉ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
ಸಂಬಂಧಿತ · Related
Buzz
Toxic Worldwide Release: Yash’s Character Posters, One by One
Buzz
ZEE5 Kannada Upcoming Originals: 8 New Titles Coming Soon
Buzz
Toxic Pre-Release Event: Rukmini Vasanth Speech Highlights
Buzz
‘ನೀ ನಂಗೆ ಅಲ್ಲವಾ’ ಮೊದಲ ಹಾಡು ‘ನೋ ನೋ…’ ಬಿಡುಗಡೆ
Buzz
ಭಾವಾಂತರ: ಕಾರ್ತಿಕ್ ಶರ್ಮರ ಕನಸು, ವಿಭಿನ್ನ ಪೋಸ್ಟರ್ಗೆ ಭಾರೀ ಚರ್ಚೆ
Buzz
ನಾಗಭೂಷಣ್ ಹೊಸ ಚಿತ್ರ: 90ರ ದಶಕದ ಕೌಟುಂಬಿಕ ಕಥೆ
Buzz
ಅಮೇರಿಕಾ ಅಮೇರಿಕಾ 2: ಹೊಸ ಕಥೆ, ಹಳೆಯ ಪ್ರೀತಿ!
Buzz
ಹುಬ್ಬಳ್ಳಿ ಹಂಟರ್ಸ್: ‘ಬೆಲ್ ಬಾಟಮ್’ ನಿರ್ಮಾಪಕರ ಹೊಸ ಸಿನಿಮಾ ಡಬ್ಬಿಂಗ್ ಪೂರ್ಣ
Buzz
Cocktail 2: Netflix Date for Romantic Comedy
📢 Never miss a Sandalwood updateNew movies, trailers & OTT updates — first.