ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಹೋದರ ಸಂಬಂಧಿ
ಮನೋಜ್ ಕುಮಾರ್ ನಾಯಕನಾಗಿ ಕಾಣಿಸಿಕೊಂಡಿರುವ ಟಕ್ಕರ್
ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ. ಚಕ್ರವರ್ತಿ ಚಿತ್ರದಲ್ಲಿ
ಖಳನಟನಾಗಿ ನಟಿಸಿದ್ದ ಮನೋಜ್ ಈ ಚಿತ್ರದ ಮೂಲಕ ಪೂರ್ಣ
ಪ್ರಮಾಣದ ನಾಯಕನಾಗಿ ಕಾಣಿಸಿಕೊಂಡಿದ್ದು ರಘುಶಾಸ್ತ್ರಿ ಅವರು
ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ದಿನಕರ್ ತೂಗುದೀಪ್ ಅವರು
ಟಕ್ಕರ್ ಚಿತ್ರದ ಟೀಸರ್ ಬಿಡುಗಡೆ ಮಾಡಿ ಮನೋಜ್ ಹಾಗೂ ಚಿತ್ರತಂಡಕ್ಕೆ
ಶುಭಹಾರೈಸಿದ್ದಾರೆ. ಮನೋಜ್ ಅವರಿಗೆ ಜೋಡಿಯಾಗಿ ಪುಟ್ಟ ಗೌರಿ ಮದುವೆ
ಖ್ಯಾತಿಯ ರಂಜನಿ ಅವರು ನಟಿಸಿದ್ದಾರೆ. ಮಣಿಕಾಂತ್ ಕದ್ರಿ ಅವರು ಸಂಗೀತ
ಸಂಯೋಜನೆ ಮಾಡಿದ್ದಾರೆ. ಈ ಹಿಂದೆ ಹುಲಿರಾಯ ಚಿತ್ರವನ್ನು ನಿರ್ಮಾಣ
ಮಾಡಿದ್ದ ನಾಗೇಶ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಟೀಸರ್ ನೋಡಿ
https://youtu.be/IKWi_BeCYe0









