flixOye
Buzz

“ರಗಡ್” ನಲ್ಲೊಂದು ನೈಜಘಟನೆಯ ಮನಕಲುಕುವ ಪ್ರೇಮಕಥೆ

ಕಳೆದ ವಾರ ವಿನೋದ್ ಪ್ರಭಾಕರ್ ಅಭಿನಯದಲ್ಲಿ ತೆರೆಕಂಡ
ರಗಡ್ ಚಿತ್ರವು ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.
ಬರೀ ಆಕ್ಸನ್ ಪಾತ್ರಗಳಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ವಿನೋದ್ ಪ್ರಭಾಕರ್ ಮೊದಲಬಾರಿಗೆ ನವಿರಾದ ಪ್ರೇಮಕಥೆಯಲ್ಲಿ ನಾಯಕನಾಗಿ ಕಾಣಿಸಿ
ಕೊಂಡಿದ್ದಾರೆ. ನೈಜಪ್ರೇಮಕಥೆಯನ್ನಾಧರಿಸಿದ ಈ ಚಿತ್ರವನ್ನು
ಮಹೇಶ್ ಗೌಡ ಅವರು ಕಥೆ ಚಿತ್ರಕಥೆ ಸಂಭಾಷಣೆ ಸಾಹಿತ್ಯ ಬರೆದು
ನಿರ್ದೇಶನ ಮಾಡಿದ್ದಾರೆ. ಇನ್ನು ಈ ಚಿತ್ರದಲ್ಲಿ ಸಾಹಸ ದೃಶ್ಯಗಳು ಇದ್ದು ಅಭಿಮಾನಿಗಳನ್ನು ರಂಜಿಸಿ ಮೆಚ್ಚುಗೆ ಪಡೆಯುತ್ತಿದೆ‌. ಇನ್ನು ಚಿತ್ರದಲ್ಲಿ
ಹಾಡುಗಳು ಸಹ ಅದ್ಬುತವಾಗಿದ್ದು ಅಭಿಮನ್‍ರಾಯ್ ಅವರು ಸಂಗೀತ
ಸಂಯೋಜನೆ ಮಾಡಿದ್ದಾರೆ. ಪಕ್ಕಾ ಪೈಸಾ ವಸೂಲ್ ಸಿನಿಮಾ ರಗಡ್.

ಸಂಬಂಧಿತ · Related