ಭಾರೀ ಮೊತ್ತಕ್ಕೆ ’90’ ಸೋಲ್ಡೌಟ್!!?

Published on

555 Views
Advertisement

ಆಡಿಯೋ ಮಾರುಕಟ್ಟೆ ಪಾತಾಳದಲ್ಲಿದೆ ಎಂಬ ಹೊತ್ತಲ್ಲಿ, ಹಾಸ್ಯ ನಟ ಬಿರಾದಾರ್ ಅಭಿನಯದ “90 ಬಿಡಿ ಮನೀಗ್ ನಡಿ” ಸಿನಿಮಾದ ಹಾಡುಗಳು ಭಾರೀ ಮೊತ್ತಕ್ಕೆ ಸೋಲ್ಡೌಟ್ ಆಗಿದೆ!!. ಹೌದು! ‘A2 ಮ್ಯೂಸಿಕ್’ ಕಂಪೆನಿಯು ಚಿತ್ರತಂಡ ನಿರೀಕ್ಷಿಸದ ಭಾರೀ ಮೊತ್ತ ಕೊಟ್ಟು ಹಾಡುಗಳನ್ನ ಕೊಂಡುಕೊಂಡಿದೆ.! ಹಿರಿಯ ನಟ ‘ವೈಜನಾಥ ಬಿರಾದಾರ್’ ಅಭಿನಯದ ಐನೂರನೇ ಚಿತ್ರ ಎಂಬ ಸದ್ದಿನೊಂದಿಗೆ ತಣ್ಣಗೆ ಸುದ್ದಿಯಲ್ಲಿದ್ದ ಚಿತ್ರಕ್ಕೆ, ಇದೀಗ ಆಡಿಯೋ ಕಂಪೆನಿ ಕೊಟ್ಟ ಆಫರ್ ಮೈಲೇಜ್ ಹೆಚ್ಚಿಸಿದೆ. ಅಲ್ಲಿಗೆ ಹಾಸ್ಯನಟ ಬಿರಾದಾರ್ ಅವರನ್ನ ಕಮರ್ಷಿಯಲ್ ನಾಯಕನನ್ನಾಗಿಸುವಂಥ ಸಾಹಸ ತೋರಿದ ಬಾಗಲಕೋಟೆಯ “ಅಮ್ಮಾ ಟಾಕೀಸ್” ಸಂಸ್ಥೆಗೆ ಸಹಜವಾಗೇ ಖುಷಿ ಇಮ್ಮಡಿಯಾಗಿದೆ.

Advertisement

ಅಸಲಿಗೆ, ಈ ಸಿನಿಮಾ ಇತ್ತೀಚೆಗೆ ಸೆನ್ಸಾರ್ ಮಂಡಳಿಯಿಂದ ಟೈಟಲ್ ತಗಾದೆ ಎದುರಿಸಿ, “90 ಹೊಡಿ ಮನೀಗ್ ನಡಿ” ಬದಲಿಗೆ “90 ಬಿಡಿ ಮನೀಗ್ ನಡಿ” ಎಂದು ಟೈಟಲ್ ಬದಲಿಸಿಕೊಂಡು ಒಲ್ಲದ ಮನಸ್ಸಿನಿಂದಲೇ ಮಗ್ಗುಲು ಬದಲಿಸಿತ್ತು. ಅದಾದ ಮೇಲೆ ನಡೆದ ಈ ಆಡಿಯೋ ಮೂಲದ ಭಾರೀ ಬೆಳವಣಿಗೆಯಿಂದಾಗಿ ಚಿತ್ರತಂಡ ಫುಲ್ ಖಷ್ ಆಗಿದೆ. ಹಾಗೆ ನೋಡಿದರೆ, ಈ ಸಿನಿಮಾ ಸೆಟ್ಟೇರಿದಾಗಿನಿಂದಲೂ ಗಾಂಧಿ ನಗರದಲ್ಲಿ ಇವರ ಹೊಸ ಸಾಹಸದ ಬಗ್ಗೆ ಸದ್ದಂತು ಇದ್ದೇ ಇತ್ತು.! “ಎಪ್ಪತ್ತು ವರ್ಷದ ಹಿರಿಯ ನಟನನ್ನ, ಕಮರ್ಷಿಯಲ್ ಚಿತ್ರಕ್ಕೆ ಹೀರೋ ಮಾಡಿದ್ದೇ ಒಂದು ಹೊಸ ಪ್ರಯೋಗ ಮತ್ತು ಸಾಹಸ” ಎಂಬುದು ಸಿನಿಪಂಡಿತರ ಲೆಕ್ಕಾಚಾರದ ಮಾತಾಗಿದೆ.!! ಅದರಂತೆ ಇದೀಗ ಸಿನಿಮಾ ಪೂರ್ಣಗೊಂಡು ಫಸ್ಟ್ ಕಾಪಿ ತಯಾರಾಗಿದೆ. ಮುಂದುವರೆದ ಚಿತ್ರತಂಡ ಸಿನಿಮಾ ಸೆನ್ಸಾರ್ ಕಾರ್ಯ ಮುಗಿಸಿಕೊಂಡು, ಚಿತ್ರದ ಮುಂದಿನ ಬೆಳವಣಿಗೆಯ ಕಾರ್ಯವಾಗಿ ಆಡಿಯೋ ಕಂಪೆನಿಯ ಕದ ತಟ್ಟಿದೆ. ಅಲ್ಲಿ ಹಾಡಿಗೆ ಸಿಕ್ಕ ಪ್ರಶಂಸೆ ಮತ್ತು ಭಾರೀ ಬೆಲೆ ಕಂಡು ಚಿತ್ರತಂಡಕ್ಕೆ ” ತಮ್ಮ ರಿಸ್ಕೀ ಸಾಹಸ ಸಾರ್ಥಕ ಎನಿಸಿದೆ.”!!

Advertisement

“ಮೊದಲಿಗೆ ನಾವು ತೋರಿಸಿದ ಪ್ರಿವ್ಯೂವ್ ಹಾಡು ಕಂಡ ಕಂಪೆನಿಯವರು, ಎಪ್ಪತ್ತು ವರ್ಷದ ಬಿರಾದಾರ್ ಡಾನ್ಸ್ ಸ್ಟೆಪ್ಸ್ ಗೆ ಫುಲ್ ಫಿದಾ ಆಗಿ, ನಮ್ಮ ಈ ಸಾಹಸಕ್ಕೆ ಬೆನ್ನು ತಟ್ಟಿ ಭೇಷ್ ಎಂದಿದ್ದಾರೆ” ಎನ್ನುತ್ತಾರೆ ಚಿತ್ರದ ಜಂಟಿ ನಿರ್ದೇಶಕರಾದ ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ. ಹೀಗೆ ಖುದ್ದು ಆಡಿಯೋ ಕಂಪೆನಿಯವರೇ “ನಿಮ್ಮ ಸಿನಿಮಾದ ಹಾಡುಗಳು ಸದ್ದು ಮಾಡುತ್ತವೆ” ಎಂದು ಹೇಳಿ, ನಿರೀಕ್ಷೆಗೂ ಮೀರಿ ಸಾಥ್ ಕೊಟ್ಟಿದ್ದು ಸಹಜವಾಗೇ “ನೈಂಟಿ” ಟೀಮಿಗೆ ಆನೆ ಬಲ ಬಂದಂತಾಗಿದೆ. ಅದೇ ಖುಷಿಯಲ್ಲಿ ಸದ್ಯ ಟೀಸರ್ ಒಂದನ್ನ ಜನರ ಮುಂದಿಡಲು ತಯಾರಿ ನಡೆದಿದ್ದು ಸ್ಟಾರ್ ನಟರೊಬ್ಬರು ಸಾಥ್ ನೀಡುತ್ತಿದ್ದಾರಂತೆ. ಒಟ್ಟಿನಲ್ಲಿ ಕುಡಿತದ ಬಗ್ಗೆ ಹೇಳುತ್ತಾ ಕಾಮಿಡಿ ಜೊತೆ ಕ್ರೈಂ ಥ್ರಿಲ್ಲರ್ ರೂಪದಲ್ಲಿ ಚಿತ್ರ ಕಟ್ಟಿಕೊಡಲಾಗಿದದ್ದು, ಶೀಘ್ರದಲ್ಲೇ ಸಿನಿಮಾ ತೆರೆ ಕಾಣಿಸುವ ಪ್ರಯತ್ನದಲ್ಲಿದ್ದೇವೆ” ಎನ್ನುತ್ತಿದೆ ಚಿತ್ರತಂಡ.

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com