‘ಭಜರಂಗಿ’, ‘ವಜ್ರಕಾಯ’, ‘ಭಜರಂಗಿ 2’ ಹೀಗೆ ಆಂಜನೇಯನಾ ಹೆಸರುಗಳನ್ನೆ ತಮ್ಮ ಸಿನಿಮಾಕ್ಕೆ ಇಟ್ಟು ಯಶಸ್ಸು ಕಂಡಿದ್ದ ಹರ್ಷ ತಮ್ಮ ಮುಂದಿನ ಸಿನಿಮಾಕ್ಕೆ ಈಗ ‘ಮುತ್ತುರಾಯ’ ಎಂದು ಹೆಸರಿಟ್ಟಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಜನವರಿಯಲ್ಲಿ ಪ್ರಾರಂಭವಾಗಲಿದ್ದು, ಹರ್ಷ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಇದು 4 ನೇ ಸಿನಿಮಾವಾಗಿದ್ದು, ಶಿವಣ್ಣ ನಟನೆಯ 124 ನೇ ಚಿತ್ರವಾಗಲಿದೆ. ‘ಮುತ್ತುರಾಯ’ ಹೆಸರು ಇಟ್ಟಿದ್ದೇವೆ. ಅದರೆ ಇದೇ ಫೈನಲ್ ಅಲ್ಲ. ಹೆಸರಿನ ಬದಲಾವಣೆಯಾದರೂ ಆಗಬಹುದು. ಈ ತಿಂಗಳ ಕೊನೆಯಲ್ಲಿ ಹೆಸರನ್ನು ರಿವೀಲ್ ಮಾಡುತ್ತೇವೆ ಎಂದಿದ್ದಾರೆ ನಿರ್ದೇಶಕ ಹರ್ಷ. ಭಜರಂಗಿ -2 ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಇದು ಹಿಂದಿ ಡಬ್ಬಿಂಗ್ ರೈಟ್ಸ್ 5.5 ಕೋಟಿಗೆ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ ಎನ್ನಲಾಗುತ್ತಿದೆ.
ಸಂಬಂಧಿತ · Related
Buzz
Toxic Worldwide Release: Yash’s Character Posters, One by One
Buzz
ZEE5 Kannada Upcoming Originals: 8 New Titles Coming Soon
Buzz
Toxic Pre-Release Event: Rukmini Vasanth Speech Highlights
Buzz
‘ನೀ ನಂಗೆ ಅಲ್ಲವಾ’ ಮೊದಲ ಹಾಡು ‘ನೋ ನೋ…’ ಬಿಡುಗಡೆ
Buzz
ಭಾವಾಂತರ: ಕಾರ್ತಿಕ್ ಶರ್ಮರ ಕನಸು, ವಿಭಿನ್ನ ಪೋಸ್ಟರ್ಗೆ ಭಾರೀ ಚರ್ಚೆ
Buzz
ನಾಗಭೂಷಣ್ ಹೊಸ ಚಿತ್ರ: 90ರ ದಶಕದ ಕೌಟುಂಬಿಕ ಕಥೆ
Buzz
ಅಮೇರಿಕಾ ಅಮೇರಿಕಾ 2: ಹೊಸ ಕಥೆ, ಹಳೆಯ ಪ್ರೀತಿ!
Buzz
ಹುಬ್ಬಳ್ಳಿ ಹಂಟರ್ಸ್: ‘ಬೆಲ್ ಬಾಟಮ್’ ನಿರ್ಮಾಪಕರ ಹೊಸ ಸಿನಿಮಾ ಡಬ್ಬಿಂಗ್ ಪೂರ್ಣ
Buzz
Cocktail 2: Netflix Date for Romantic Comedy
📢 Never miss a Sandalwood updateNew movies, trailers & OTT updates — first.