‘ಮಜೆಸ್ಟಿಕ್’ ಕನ್ನಡ ಸಿನಿಮಾ 16 ನೇ ವರ್ಷದ ನೆನಪು

Published on

501 Views
Advertisement

ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸು ಗಳಿಕೆಯಲ್ಲಿ ಧೂಳೆಬ್ಬಿಸಿದ ‘ಮಜೆಸ್ಟಿಕ್’ ಕನ್ನಡ ಸಿನೆಮಾ ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವೃತ್ತಿ ಬದುಕಿನ ಒಂದು ಹೊಸ ಅಧ್ಯಾಯ ಬರೆದ ಚಿತ್ರ ಸಹ ಹೌದು.

ಗುರುವಾರ ನೆಲಮಂಗಲ ಬಳಿಯ ಒಂದು ಖಾಸಗಿ ರೆಸಾರ್ಟ್ ಅಲ್ಲಿ ‘ಮಜೆಸ್ಟಿಕ್’ ಸಿನಿಮಾದ 16ನೇ ವರ್ಷದ ನೆನಪು ಹಾಗೂ ಅದಕ್ಕೆ ದುಡಿದ ವ್ಯಕ್ತಿಗಳನ್ನು ಗೌರವಿಸುವ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿತ್ತು. ಹಾರ, ಶಾಲು,ಮೈಸೂರು ಟೋಪಿ ಹಾಗೂ ಹಣ್ಣಿನ ಬುಟ್ಟಿ ಗೌರವರ್ಪಣೆಯ ಭಾಗವಾಗಿತ್ತು.

Advertisement

ನಾಯಕ ದರ್ಶನ್ ಅವರು ಅಂದು ನಿರ್ಮಾಪಕ ಎಂ ಜಿ ರಾಮಮೂರ್ತಿ ಅವರು ಬಳಸುತ್ತಾ ಇದ್ದ ಮಾರುತಿ 800 ಕಾರನ್ನು ಅವರಿಂದ ಪಡೆದದ್ದು ವಿಶೇಷವಾಗಿತ್ತು. ಅಂದಿನ ದಿನಗಳನ್ನು ಮೆಲುಕು ಹಾಕುತ್ತಾ ಮಾರುತಿ 800 ಕಾರಿನಲ್ಲಿ ದರ್ಶನ್ ಒಂದು ಸುತ್ತು ಹೋಗಿ ಬಂದರು. ಆ ಮಾರುತಿ 800 ಕಾರಿನ ಸಂಖ್ಯೆ 3483 ದರ್ಶನ್ ಅವರ ನೆನಪಿನಲ್ಲಿ ಇತ್ತು. ಅಂದು ಆಸೆ ಪಟ್ಟ ಕಾರು ಇಂದು ದರ್ಶನ್ ಅವರ ಮನೆಯಲ್ಲಿ ಒಂದು ಅಮೂಲ್ಯ ನೆನಪಾಗಿ ಉಳಿಯಲಿದೆ.

‘ಮಜೆಸ್ಟಿಕ್’, ‘ಧರ್ಮ’ ಸಿನಿಮಾಗಳನ್ನು ಎಂ ಜಿ ರಾಮಮೂರ್ತಿ ಅವರು ನಿರ್ಮಾಣ ಮಾಡಿರುವುದು ತಿಳಿದಿದೆ. ಈಗ ಅವರದು ದರ್ಶನ್ ಅವರ ಜೊತೆ ಮೂರನೇ ಚಿತ್ರ ಹಾಗೂ ಅದು ದರ್ಶನ್ ಅವರ 53 ನೇ ಸಿನಿಮಾ ಎಂದು ಸಹ ಘೋಷಣೆ ಆಯಿತು.

Advertisement [amazon_link asins=’B0756RFBL7,B073VLGL5Y,B0784BZ5VY,B0785R3ZYN,B0764FLPKQ,B01M0811EC,B0756ZFXVB,B0719KYGMQ,B0756RCTK2,B0756ZBZ5P’ template=’ProductCarousel’ store=’flixoye25-21′ marketplace=’IN’ link_id=’2dcc7d17-13be-11e8-a143-e9605a3a9269′]

ಮಜೆಸ್ಟಿಕ್ ಸಿನಿಮಾದ ನಿರ್ದೇಶಕರಾದ ಪಿ ಎನ್ ಸತ್ಯ, ಸಹ ನಿರ್ದೇಶಕರಾಗಿದ್ದ ಮಾದೇಶ್ ಹಾಗೂ ಸುರೇಶ್ ಗೋಸ್ವಾಮಿ, ಪ್ರಚಾರಕರ್ತ ವಿಜಯಕುಮಾರ್, ಛಾಯಾಗ್ರಾಹಕರಾದ ಎಂ ಆರ್ ಸೀನು ಹಾಗೂ ಅಣಜಿ ನಾಗರಾಜ್ , ಮ್ಯಾನೇಜರ್ ರಾಮು ಸ್ಥಿರ ಛಾಯಾಗ್ರಹಕ ರಮೇಶ್ ಹಾಗೂ ಇನ್ನಿತರರನ್ನು ಅಂದು ಸನ್ಮಾನಿಸಲಾಯಿತು. ಎಂ ಜಿ ರಾಮಮೂರ್ತಿ ಹಾಗೂ ದರ್ಶನ್ ಅವರ ಲವಲವಿಕೆಯ ಉಪಸ್ಥಿತಿ ಅಂದು ನೆರದವರಿಗೆ ಆತ್ಮೀಯತೆ ತುಂಬಿದ ಕಾರ್ಯಕ್ರಮ ಆಗಿ ಕಂಡುಬಂದಿತು.

ಹಿರಿಯ ನಟರುಗಳಾದ ಜೈ ಜಗದೀಶ್, ಹರೀಶ್ ರಾಯ್, ನಿರ್ಮಾಪಕ ಭೋಜರಾಜ ರೈ ಹಾಗೂ 200ಕ್ಕು ಹೆಚ್ಚು ಮಂದಿ ಅಂದಿನ ಔತಣ ಕೂಟದಲ್ಲಿ ಪಾಲ್ಗೊಂಡು ಹರ್ಷದ ದಿವಸಗಳನ್ನು ಮೆಲುಕು ಹಾಕಿ ನೆಮ್ಮದಿ ಪಟ್ಟುಕೊಂಡರು.

Advertisement

More Buzz

Trailers 2 weeks ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 2 weeks ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 3 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 3 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 3 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 3 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 3 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 3 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 3 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com