flixOye
Buzz

1 – 11 = – ಚಿತ್ರದ ಚಿತ್ರೀಕರಣ ಮುಕ್ತಾಯ


1 – 11 = – ಚಿತ್ರದ ಚಿತ್ರೀಕರಣ ಮುಕ್ತಾಯ

ಶ್ರೀಗುಳಿಗುಡ್ಡ ಬಸವ ಪ್ರೊಡಕ್ಶನ್ಸ್ ಲಾಂಛನದಲ್ಲಿ ಎಂ.ಶಿವಕುಮಾರ್(ಮಳವಳ್ಳಿ) ಅವರು ನಿರ್ಮಿಸುತ್ತಿರುವ `1_11=-` ಹೆಸರಿನ ಹಾರಾರ್ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಡಾ||ರಾಜಕುಮಾರ್ ಅವರ ಸಮಾಧಿ ಬಳಿ ಚಿತ್ರದ ಚಿತ್ರೀಕರಣವನ್ನು ಕುಂಬಳಕಾಯಿ ಒಡೆಯುವುದರ ಮೂಲಕ ಮುಕ್ತಾಯಗೊಳಿಸಲಾಗಿದೆ. ಬೆಂಗಳೂರು, ಕುಣಿಗಲ್, ಮಡಿಕೇರಿ, ಕೋಲಾರ, ರಾಮನಗರ, ಮುಂತಾದ ಕಡೆ ಚಿತ್ರಕ್ಕೆ 31ದಿನಗಳ ಚಿತ್ರೀಕರಣ ನಡೆದಿದೆ.

Advertisement

ಎಸ್.ಆನಂದಕುಮಾರ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇದು ಅವರ ನಿರ್ದೇಶನದ 9ನೇ ಚಿತ್ರ. ಚಿತ್ರದಲ್ಲಿ ಐದು ಹಾಡುಗಳಿದ್ದು, ಸ್ನೇಹಜೀವಿ ಶಿವಮೂರ್ತಿ ಸಂಗೀತ ನೀದಿದ್ದಾರೆ. ರಾಜ್‍ಭಾಸ್ಕರ್ ಹಿನ್ನಲೆ ಸಂಗೀತ ನೀಡಿರುವ ಈ ಚಿತ್ರಕ್ಕೆ ರಾಧಾಕೃಷ್ಣ ಅವರ ಛಾಯಾಗ್ರಹಣವಿದೆ. ರಾಜಶೇಖರ್ ರೆಡ್ಡಿ ಸಂಕಲನ, ಕ್ಲಾಸಿಕ್ ರವಿ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಅರ್ಜುನ್, ಖುಷಿ, ಟೆನ್ನಿಸ್ ಕೃಷ್ಣ, ಭವ್ಯ, ಸಚ್ಚಿನ್ ಪುರೋಹಿತ್, ಅಭಿಲಾಶ್, ಹರ್ಷ ಮುಂತಾದವರಿದ್ದಾರೆ.

ಸಂಬಂಧಿತ · Related